ಮಂಗಳೂರು, ಅ 9: ಬುದ್ದಿವಂತರ ಊರು ಮಂಗಳೂರಿನಲ್ಲಿ ಮತ್ತೆ ಬಾಲ ಬಿಚ್ಚಿದ್ದಾರೆ ರೌಡಿಗಳು.. ದಿನೇ ದಿನೇ ನಗರ ವ್ಯಾಪ್ತಿಯಲ್ಲಿ ಪುಢಾರಿಗಳು , ರೌಡಿಗಳ ಅಟ್ಟಹಾಸ ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ಪೊಲೀಸರು ಕೂಡಾ ಅಲರ್ಟ್ ಆಗಿದ್ದಾರೆ. ಹೀಗಾಗಿ ನಗರದ ಕಮೀಷನರೇಟ್ ವ್ಯಾಪ್ತಿಯಲ್ಲಿ ಒಂದಲ್ಲ , ಎರಡು ರೌಡಿ ನಿಗ್ರಹ ದಳಗಳನ್ನು ಸ್ಥಾಪಿಸುವ ತೀರ್ಮಾನವನ್ನು ಪೊಲೀಸ್ ಇಲಾಖೆ ಕೈಗೊಂಡಿದೆ. ದಕ್ಷಿಣ ಪೊಲೀಸ್ ವಿಭಾಗ ಮತ್ತು ಉತ್ತರ ಪೊಲೀಸ್ ವಿಭಾಗದಲ್ಲಿ ಆ್ಯಂಟಿ ರೌಡಿಸಂ ಸ್ಕ್ವಾಡ್ ರಚಿಸಿ ಆದೇಶ ಹೊರಡಿಸಲಾಗಿದೆ.
ಎಸಿಪಿ ರಾಮ್ ರಾವ್ ಮತ್ತು ಎಸಿಪಿ ರಾಜೇಂದ್ರ ಡಿ,ಎಸ್ ನೇತೃತ್ವದಲ್ಲಿ ಈ ಎರಡು ರೌಡಿ ನಿಗ್ರಹ ದಳಗಳು ಶೀಘ್ರದಲ್ಲೇ ಅಸ್ತಿತ್ವಕ್ಕೆ ಬರಲಿದೆ.
ಸೆಪ್ಟೆಂಬರ್ ತಿಂಗಳ ಕೊನೆಯ ವಾರದಿಂದ ಜಿಲ್ಲೆಯಲ್ಲಿ ರೌಡಿಗಳ ಅಟ್ಟಹಾಸ ತೀವ್ರ ಸ್ವರೂಪ ಪಡೆದುಕೊಂಡಿದ್ದು, ಈಗಾಗಲೇ ಗ್ಯಾಂಗ್ ವಾರ್ ಗೆ 3 ಬಲಿಯಾಗಿದೆ. ಈ ಹಿನ್ನಲೆಯಲ್ಲಿ ಮಂಗಳೂರು ನಗರ ಪೊಲೀಸ್ ಆಯುಕ್ತ ಟಿ. ಆರ್ ಸುರೇಶ್ ಅವರು ರೌಡಿ ನಿಗ್ರಹ ದಳ ರಚನೆ ಮಾಡುವ ತೀರ್ಮಾನ ತೆಗೆದುಕೊಂಡಿದ್ದಾರೆ. ಇನ್ನು ದ.ಕ ಜಿಲ್ಲಾ ವ್ಯಾಪ್ತಿಯಲ್ಲಿ ಸುಮಾರು 1000 ರೌಡಿಗಳು ಲಿಸ್ಟ್ ನಲ್ಲಿದ್ದಾರೆ. ಇವರಿಗೆಲ್ಲರಿಗೂ ಅಗ್ಯಾಗ್ಗೆ ಕರೆಸಿ ಎಚ್ಚರಿಕೆ ನೀಡೋ ಕೆಲಸ ನಡಿತಾನೇ ಇದೆ.