ಬೆಂಗಳೂರು, ಅ 12(SM): ವ್ಯಕ್ತಿಗಿಂತ ಪಕ್ಷವೇ ಮುಖ್ಯ, ರಾಷ್ಟ್ರದ ಹಿತದೃಷ್ಟಿಯಿಂದ ಎಷ್ಟೇ ನೋವಾದರೂ ಕೆಲವೊಂದು ನಿರ್ಧಾರಗಳನ್ನು ಸ್ವಾಗತಿಸಬೇಕಾಗುತ್ತದೆ ಎಂದು ಜಲಸಂಪ್ಮೂಲ ಸಚಿವ ಡಿಕೆ ಶಿವಕುಮಾರ್ ಹೇಳಿದ್ದಾರೆ.
ವಿಧಾನಸಭಾ ಉಪಚುನಾವಣೆ ಹಿನ್ನೆಲೆ ಮಂಡ್ಯ ಹಾಗೂ ಬಳ್ಳಾರಿಯ ಅಭ್ಯರ್ಥಿ ಆಯ್ಕೆ ಗೊಂದಲದ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಹೈಕಮಾಂಡ್ ನಿರ್ಧಾರವೇ ಅಂತಿಮ ಎಂದು ಹೇಳುವ ಮೂಲಕ ಮಂಡ್ಯ ಉಪ ಚುನಾವಣೆಯಲ್ಲಿ ಜೆಡಿಎಸ್ ಜೊತೆಗಿನ ಮೈತ್ರಿ ಅಂತಿಮವಾಗಿದೆ ಎನ್ನುವುದಕ್ಕೆ ಸುಳಿವು ನೀಡಿದ್ದಾರೆ.
ಇದೇ ವೇಳೆ ಬಳ್ಳಾರಿ ಅಭ್ಯರ್ಥಿ ಆಯ್ಕೆ ಕುರಿತು ಪ್ರತಿಕ್ರಿಯೆ ನೀಡಿದ ಡಿಕೆಶಿ, ಎಲ್ಲರೊಂದಿಗೆ ನಾನು ಚರ್ಚೆನಡೆಸಿದ್ದೇನೆ. ಆದರೆ ಎಲ್ಲದಕ್ಕೂ ಕೂಡ ಕಾಲ ಕೂಡಿ ಬರಬೇಕು. ಅಭ್ಯಥಿ ಯಾರೇ ಆದರೂ ಒಗ್ಗಟ್ಟಿಂದ ಅಭ್ಯರ್ಥಿ ಪರ ಕೆಲಸ ಮಾಡಿ ಗೆಲ್ಲಿಸುತ್ತೇವೆ ಎಂದಿದ್ದಾರೆ.