ನವದೆಹಲಿ, ಅ13(SS): ಪ್ರಧಾನಿ ನರೇಂದ್ರ ಮೋದಿಯನ್ನು ಹತ್ಯೆ ಮಾಡಲು ನಕ್ಸಲರು ಪ್ಲಾನ್ ಮಾಡಿದ್ದಾರೆಂಬ ಸುದ್ದಿ ಇತ್ತೀಚೆಗೆ ಭಾರಿ ಸಂಚಲನ ಮೂಡಿಸಿತ್ತು. ಇದರ ಬೆನ್ನಲ್ಲೇ ಮತ್ತೊಂದು ಜೀವ ಬೆದರಿಕೆ ಪ್ರಧಾನಿ ಮೋದಿಗೆ ಎದುರಾಗಿದೆ.
ಪ್ರಧಾನಿ ನರೇಂದ್ರ ಮೋದಿಯನ್ನು ಕೊಲ್ಲುವುದಾಗಿ ಬೆದರಿಕೆ ಬಂದಿದೆ ಎಂದು ದೆಹಲಿ ಪೊಲೀಸ್ ಕಮಿಷನರ್ ಅತಂಕಕಾರಿ ಮಾಹಿತಿ ಹೊರ ಹಾಕಿದ್ದಾರೆ. ಕೇವಲ ಒಂದು ಸಾಲಿನಲ್ಲಿ ಮೋದಿಯನ್ನು ಕೊಲ್ಲುವುದಾಗಿ ದೆಹಲಿ ಪೊಲೀಸ್ ಕಮಿಷನರ್ ಕಚೇರಿಯ ಇ - ಮೇಲ್ ಐಡಿಗೆ ಮೇಲ್ ಕಳಿಸಲಾಗಿದೆ.
ನವೆಂಬರ್ 2019ರಲ್ಲಿ ಮೋದಿಯನ್ನು ಕೊಲ್ಲುವುದಾಗಿ ಬೆದರಿಕೆ ಹಾಕಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ. ಇನ್ನೊಂದೆಡೆ, 2019ರ ಲೋಕಸಭೆ ಚುನಾವಣೆ ಸಮೀಪಿಸುತ್ತಿರುವುದರಿಂದ ಪ್ರಧಾನಿಗೆ ಅಧಿಕ ಭದ್ರತೆ ನಿಯೋಜಿಸಲಾಗಿದೆ.