ಮುಂಬೈ, ಅ13(SS): ಮಹಾರಾಷ್ಟ್ರ ಬಿಜೆಪಿ ವಕ್ತಾರ ಅವಧೂತ್ ವಾಘ್, ಪ್ರಧಾನಿ ಮೋದಿ ಅವರನ್ನು ವಿಷ್ಣುವಿನ 11ನೇ ಅವತಾರ ಎಂದು ಕರೆದಿದ್ದಾರೆ.ಪ್ರಧಾನಿ ನರೇಂದ್ರ ಮೋದಿಯನ್ನು ಭಗವಂತ ವಿಷ್ಣುವಿನ 11ನೇ ಅವತಾರ ಎಂದು ಹೇಳುವ ಮೂಲಕ ಮಹಾರಾಷ್ಟ್ರ ಬಿಜೆಪಿ ವಕ್ತಾರ ಅಚ್ಚರಿಕೆಯ ಹೇಳಿಕೆ ನೀಡಿದ್ದಾರೆ.
ಬಿಜೆಪಿ ನಾಯಕ ಅವಧೂತ್ ವಾಘ್ ಅವರು ಪ್ರಧಾನಿ ಮೋದಿ ವಿಷ್ಣುವಿನ 11ನೇ ಅವತಾರ, ಅವರಿಗೆ ಪೂಜ್ಯ ಸ್ಥಾನ ನೀಡಬೇಕು. ಅವರನ್ನು ದೇವತಾ ಭಾವದಿಂದ ಕಾಣಬೇಕು. ಪ್ರಧಾನಿ ಮೋದಿ ವಿಷ್ಣುವಿನ ಅವತಾರವೆತ್ತಿ ಬಂದಿದ್ದಾರೆ. ವಿಷ್ಣು 10 ಅವತಾರ ಪೂರೈಸಿ, 11ನೇ ಅವತಾರದಲ್ಲಿ ಪ್ರಧಾನಿ ಮೋದಿಯಾಗಿ ಜನ್ಮ ತಾಳಿದ್ದಾರೆ ಎಂದು ಹೇಳಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವಧೂತ್ ವಾಘ್ ಅವರು ಸಂಸ್ಕೃತ ಶ್ಲೋಕ ಯದಾ ಯದಾ ಹಿ ಧರ್ಮಸ್ಯ ಎಂದು ಟ್ವೀಟ್ ನಲ್ಲಿ ಉಲ್ಲೇಖಿಸಿದ್ದು, ಭಾರತೀಯರು ಮೋದಿ ಅವರನ್ನು ದೇವತಾ ಭಾವದಿಂದ ಕಾಣಬೇಕೆ ಹೊರತು ಪ್ರಧಾನಿ ಎಂಬ ಭಾವನೆಯಿಂದಲ್ಲ ಎಂದು ವಾಘ್ ಅಭಿಪ್ರಾಯಪಟ್ಟಿದ್ದಾರೆ.