ಉಡುಪಿ, ಅ ೧೪(): ಶಬರಿಮಲೆಗೆ ಎಲ್ಲಾ ವಯೋಮಾನದ ಮಹಿಳೆಯರ ಪ್ರವೇಶಕ್ಕೆ ಅವಕಾಶ ಕಲ್ಪಿಸಿ ಇತ್ತೀಚೆಗೆ ಸುಪ್ರೀಂಕೋರ್ಟ್ ನೀಡಿದ್ದ ಆದೇಶದ ಬಗ್ಗೆ ನಾನು ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ ಎಂದು ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ ತಿಳಿಸಿದ್ದಾರೆ.
ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿರುವ ಅವರು, ದೇವಸ್ಥಾನಗಳಿಗೆ ಮಹಿಳೆಯರು ಪ್ರವೇಶಿಸುವುದಕ್ಕೆ ನನ್ನ ಆಕ್ಷೇಪಣೆ ಇಲ್ಲ. ಉಡುಪಿಯ ಕೃಷ್ಣ ಮಠಕ್ಕೂ ಮಹಿಳೆಯರು ಪ್ರವೇಶ ಮಾಡುತ್ತಾರೆ. ದೇವರ ದರ್ಶನಕ್ಕೆ ಮಹಿಳೆಯರಿಗೂ ಕೂಡ ಅವಕಾಶವಿದೆ. ಶಿವ ದೇವಸ್ಥಾನ, ಸುಬ್ರಹ್ಮಣ್ಯ ದೇವಸ್ಥಾನಕ್ಕೂ ಮಹಿಳೆಯರು ಪ್ರವೇಶಕ್ಕೆ ಅವಕಾಶ ಇದೆ ಎಂದರು.
ಇನ್ನು ಈ ವಿಚಾರದಲ್ಲಿ ನಾನು ಮಧ್ಯ ಪ್ರವೇಶಿಸುದಿಲ್ಲ. ಶಬರಿಮಲೆಯ ಸಂಪ್ರದಾಯ ಬೇರೆಯೇ ಇದೆ. ಈ ಬಗ್ಗೆ ಚರ್ಚಿಸಲು, ನ್ಯಾಯಾಲಯ ಇದೆ. ಅರ್ಚಕರು ಹಾಗೂ ಭಕರಿದ್ದಾರೆ. ಅಲ್ಲದೆ ಅಲ್ಲಿನ ರಾಜರಿದ್ದಾರೆ. ಶಬರಿಮಲೆ ವಿಚಾರ ವನ್ನು ಅವರೇ ನೋಡಿಕೊಳ್ಳುತ್ತಾರೆ. ಮತ್ತೊಂದು ದೇವಾಲಯದ ಸಂಪ್ರದಾಯದ ಬಗ್ಗೆ ಮಾತನಾಡುವುದು ಸರಿಯಲ್ಲ ಎಂದು ಪೇಜಾವರ ಶ್ರೀಗಳು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.