ಮಂಗಳೂರು, ಅ 14(SM): ರಾಜ್ಯದ ಸಮ್ಮಿಶ್ರ ಸರಕಾರ ಸುಭದ್ರವಾಗಿದೆ. ಮುಂದಿನ ಐದು ವರ್ಷದ ಅವಧಿಗೆ ರಾಜ್ಯದಲ್ಲಿ ಸಮ್ಮಿಶ್ರ ಸರಕಾರ ಆಡಳಿತದಲ್ಲಿರಳಿದೆ ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ಮಂಗಳೂರಿನಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ. ಪ್ರತಿ ಪಕ್ಷ ಬಿಜೆಪಿ, ರಾಜ್ಯದಲ್ಲಿ ಅಧಿಕಾರಕ್ಕೇರುವ ಕನಸು ಕಾಣುತ್ತಿದೆ. ದೀಪಾವಳಿಯ ಬಳಿಕ ಅಧಿಕಾರ ನಡೆಸುತ್ತೇವೆ ಅನ್ನುವ ಕಣವರಿಕೆಯಲ್ಲಿದ್ದಾರೆ. ಆದರೆ, ಸಮ್ಮಿಶ್ರ ಸರಕಾರವನ್ನು ಯಾರಿಂದಲೂ ಕೆಡವಲು ಸಾಧ್ಯವಿಲ್ಲ ಎಂದಿದ್ದಾರೆ.
ಬಳಿಕ ಕುದ್ರೋಳಿ ಕ್ಷೇತ್ರಕ್ಕೆ ತೆರಳಿದ ಸಿಎಂ, ಮಂಗಳೂರು ದಸರಾ ಮಹೋತ್ಸವಕ್ಕೆ ಅಧಿಕೃತ ಚಾಲನೆ ನೀಡಿದ್ದಾರೆ. ನಗರದ ಕುದ್ರೋಳಿ ದೇವಸ್ಥಾನ ವಠಾರದಲ್ಲಿ ಸಿಎಂ ಕುಮಾರಸ್ವಾಮಿ ಮಂಗಳೂರು ದಸರಾಕ್ಕೆ ಚಾಲನೆ ನೀಡಿದ್ದಾರೆ.
ಬಳಿಕ ದೇವಸ್ಥಾನದೊಳಗೆ ಪ್ರವೇಶ ಮಾಡಿದ ಸಿಎಂ ನವದುರ್ಗೆಯರ ದರ್ಶನ ಪಡೆದರು. ಅಲ್ಲದೆ ಶಾರದಾ ಮಾತೆಗೆ ಸಿಎಂ ತನ್ನ ಕೈಯಾರೆ ಆರತಿ ಬೆಳಗಿದರು.
ಈ ಸಂದರ್ಭ ಸಿಎಂಗೆ ದಸರಾ ಮಂಗಳೂರು ರುವಾರಿ, ಜನಾರ್ದನ ಪೂಜಾರಿ ಸಾಥ್ ನೀಡಿದರು.