ಮಂಗಳೂರು, ಅ 9: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅಕ್ರಮ ಚಟುವಟಿಕೆಗಳನ್ನು, ಗಾಂಜಾ ಮಾರಾಟ ಜಾಲವನ್ನು ಮಟ್ಟ ಹಾಕುವುದಕ್ಕೆ ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಪಶ್ಚಿಮ ಐಜಿಪಿ ಹೇಮಂತ್ ನಿಂಬಾಳ್ಕರ್ ಗೆ ಹಿರಿಯ ಕಾಂಗ್ರೆಸ್ ಮುಖಂಡ ಪಿ.ವಿ.ಮೋಹನ್ ನೇತೃತ್ವದಲ್ಲಿ ಯೂತ್ ಕಾಂಗ್ರೆಸ್ಸ್ ಸದಸ್ಯರು ತೆರಳಿ ಮನವಿ ಸಲ್ಲಿಸಿದರು. ಆ ಬಳಿಕ ಮಾತನಾಡಿದ ಪಿ.ವಿ.ಮೋಹನ್ , ಗಾಂಜಾ ದಂಧೆ, ಸ್ಕೀಲ್ ಗೇಮ್, ಅನೈತಿಕವಾಗಿ ನಡೆಯುತ್ತಿರುವ ಮಸಾಜ್ ಪಾರ್ಲರ್ ಗಳಿಗೆ , ಕಡಿವಾಣ ಹಾಕುವಂತೆ ವಿನಂತಿಸಿದ್ದೇವೆ..ಈ ಬಗ್ಗೆ ನಾವು ನಾರ್ಕೋಟಿಕ್ಸ್ ಸೆಲ್ ನ್ನು ಜಾಗೃತ ಗೊಳಿಸಲು ನೀಡಿರುವ ಸಲಹೆಯನ್ನು ಐಜಿ ಗಣನೆಗೆ ತೆಗೆದುಕೊಂಡಿದ್ದಾರೆ ಎಂದರು.೨೦೦೫ ರಲ್ಲಿ ಮಂಗಳೂರಿನಲ್ಲಿ ಡ್ರಗ್ಸ್ ದಂಧೆಯ ವ್ಯಾಪಕಗೊಂಡಿದೆ. ಹೀಗಾಗಿ ವಿದ್ಯಾರ್ಥಿಗಳು ಮಾದಕ ವ್ಯಸನಿಗಳಾಗದಂತೆ ಕಾಲೇಜುಗಳಲ್ಲಿ ಈ ಬಗ್ಗೆ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ನೀಡಿದ ಸಲಹೆಗಳಿಗೆ ಐಜಿಪಿಯವರು ಪೂರಕವಾಗಿ ಸ್ಪಂದಿಸಿದ್ದಾರೆ ಎಂದರು. ಇದೇ ವೇಳೆ ಮಾದ್ಯಮದವರ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ದಂಡು ಪಾಳ್ಯದಂತಹ ರಾಜಕೀಯ ಬೇಡಾ.. ಬಿಜೆಪಿಯವರ ಅಜೆಂಡಾ ಕೋಮುಗಲಭೆ , ಒಳ್ಳೆಯ ರಾಜಕಾರಣ ಮಾಡೋಣ ಎಂದರು.