ನಾಗ್ಪುರ, ಅ 15 (MSP): ಹೌದು ಇದು ಎಣ್ಣೆ ಪ್ರಿಯರಿಗೆ ಮತ್ತಷ್ಟು ಕಿಕ್ ಕೊಡುವಂತ ಸುದ್ದಿ. ಪಾನ ಪ್ರೀಯರಿಗೆ ಮನೆ ಬಾಗಿಲಿಗೆ ಮದ್ಯ ಬಂದ್ರೆ ಹೇಗಿರಬೇಡ ಹೇಳಿ. ಇಷ್ಟು ದಿನ ಪಿಜ್ಜಾ, ಬರ್ಗರ್, ಬಿರಿಯಾನಿಯನ್ನ ಮನೆಯಲ್ಲೇ ಕುಳಿತು ಆರ್ಡರ್ ಮಾಡಿ ತಿನ್ನುತ್ತಿದ್ದ ಎಣ್ಣೆ ಪ್ರೀಯರಿಗೆ ಇನ್ಮುಂದೆ ಮದ್ಯವೂ ಸಿಗಲಿದೆ. ಆದ್ರೆ ಈ ಯೋಜನೆ ಮಹಾರಾಷ್ಟ್ರ ರಾಜ್ಯಕ್ಕೆ ಮಾತ್ರ ಅನ್ವಯ.
ಹೌದು ಭಾರತದಲ್ಲಿ ಇದೇ ಮೊದಲ ಬಾರಿಗೆ ಮಹಾರಾಷ್ಟ್ರ ಸರ್ಕಾರ ಇಂತಹದ್ದೊಂದು ಯೋಜನೆ ಜಾರಿಗೆ ಮುಂದಾಗಿದೆ. ಎಲ್ಲವೂ ಅಂದುಕೊಂಡಂತೆ ಅದರೆ ಈ- ಕಾಮರ್ಸ್ ವೆಬ್ ಸೈಟ್ ಗಳ ಮೂಲಕ ಅಕ್ಕಿ, ಬೇಳೆ, ತರಕಾರಿಗಳ ಜತೆಗೆ ಮದ್ಯವೂ ಸಿಗಲಿದೆ. ಈ ಬಗ್ಗೆ ಮಹಾರಾಷ್ಟ್ರ ಅಬಕಾರಿ ಸಚಿವ ಚಂದ್ರಶೇಖರ್ ಬಾವಂಕುಲೆ ಈ ಬಗ್ಗೆ ಮಾಹಿತಿ ನೀಡಿದ್ದು ಡ್ರಂಕ್ ಎಂಡ್ ಡ್ರೈವಿಂಗ್ ಪ್ರಕರಣಗಳು ದಿನೇ ದಿನೇ ಹೆಚ್ಚಾಗುತ್ತಿದ್ದು, ಇದರಿಂದ ಅಪಘಾತಗಳು ಸಂಭವಿಸಿ ಸಾಕಷ್ಟು ಜನ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಮದ್ಯ ಸೇವನೆ ಮಾಡಿ ವಾಹನ ಚಾಲಾಯಿಸುವ ಪ್ರಕರಣಗಳನು ನಿಯಂತಿಸಲು ಮದ್ಯವನ್ನ ಮನೆಗೇ ಡೆಲಿವರಿ ಮಾಡುವ ಯೋಜನೆಯನ್ನು ಜಾರಿಗೆ ತರಲು ಪ್ರಯತ್ನಿಸಲಾಗುತ್ತಿದೆ ಎಂದಿದ್ದಾರೆ.
ಇದಲ್ಲದೆ ಈಗಾಗಲೇ ಇ- ಕಾಮರ್ಸ್ ಉದ್ದಿಮೆಯಲ್ಲಿರುವ ಕಂಪನಿಗಳು ಈ ವಲಯಕ್ಕೆ ಪ್ರವೇಶಿಸಲು ಅವಕಾಶ ಕಲ್ಪಿಸಿದಂತಾಗುತ್ತದೆ. ಗ್ರಾಹಕರು ಆನ್ ಲೈನ್ ಮೂಲಕ ಇತರ ಸಾಮಾಗ್ರಿ ಕೊಳ್ಳುವಂತೆ, ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಇ-ಕಾಮರ್ಸ್ ವೆಬ್ಸೈಟ್ಗಳ ಮಾದರಿಯಲ್ಲೇ ಮದ್ಯವನ್ನು ಕೂಡಾ ಡೆಲಿವರಿ ಮಾಡಲಾಗುತ್ತದೆ ಎಂದು ಸಚಿವರು ತಿಳಿಸಿದ್ದಾರೆ. ಇನ್ನು ಆನ್ಲೈನ್ ಮೂಲಕ ಮದ್ಯವನ್ನ ಖರೀದಿಸುವವರ ವಯಸ್ಸನ್ನು ಖಚಿತಪಡಿಸಿಕೊಳ್ಳುವ ದೃಷ್ಟಿಯಿಂದ ಗ್ರಾಹಕರ ಆಧಾರ್ ನಂಬರ್ ಸೇರಿದಂತೆ ಸಂಪೂರ್ಣ ಮಾಹಿತಿ ಪಡೆದುಕೊಳ್ಳುವಂತೆ ಮಾರಾಟಗಾರರಿಗೆ ಸೂಚಿಸಲಾಗುತ್ತದೆ ಎಂದು ಅವರು ಹೇಳಿದ್ದಾರೆ.