ಭಟ್ಕಳ, ಅ.18(SS): ಚರ್ಚೆಗಳಿಗೆ ಹೆದರುವ ಚಕ್ರವರ್ತಿ ಸೂಲಿಬೆಲೆ ಒಬ್ಬ ಹೇಡಿ ಎಂದು ಹಿರಿಯ ಪತ್ರಕರ್ತ ದಿನೇಶ್ ಅಮೀನ್ ಮಟ್ಟು ಅಭಿಪ್ರಾಯಪಟ್ಟಿದ್ದಾರೆ.
ಭಟ್ಕಳದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ಚಕ್ರವರ್ತಿ ಸೂಲಿಬೆಲೆಯನ್ನು ಈ ಹಿಂದೆ ವಿವೇಕಾನಂದರ ಬಗ್ಗೆ ಚರ್ಚೆಗೆ ನಾನು ಆಹ್ವಾನಿಸಿದ್ದೆ. ಆದರೆ ಆತ ಚರ್ಚೆಗೆ ಬಂದಿಲ್ಲ. ಪ್ರತಿಯೊಂದು ಸಮುದಾಯವೂ ಟೀಕೆ, ಟಿಪ್ಪಣಿಗಳಿಗೆ ತೆರೆದುಕೊಳ್ಳಬೇಕು. ಟೀಕೆ, ವಿಮರ್ಶೆಗಳನ್ನು ಸ್ವೀಕರಿಸದೆ ಯಾವ ಸಮುದಾಯವೂ ಬೆಳೆಯಲು ಸಾಧ್ಯವಿಲ್ಲ ಎಂದು ತಿಳಿಸಿದರು.
ಜಾತ್ಯಾತೀತವಾದಿಗಳು ಮುಸ್ಲಿಮರ ಸಭೆಗಳಲ್ಲಿ ಹಿಂದೂಗಳನ್ನು ಟೀಕಿಸುತ್ತಾರೆ. ಆದರೆ ನಾನು ಮುಸ್ಲಿಮರ ಸಭೆಯಲ್ಲಿ ಮುಸ್ಲಿಮರಿಗೇ ಬಯ್ಯುತ್ತೇನೆ. ನನಗೆ ಅವಕಾಶ ಸಿಕ್ಕರೆ ಬ್ರಾಹ್ಮಣರ ಸಭೆಯಲ್ಲಿ ಅನಂತ್ ಕುಮಾರ್ ಹೆಗಡೆಯೂ ಬಯ್ಯಲು ಸಿದ್ಧ. ಆರೆಸ್ಸೆಸ್ ಸಭೆಗೆ ಹೋಗಿ ಆರೆಸ್ಸೆಸ್ ಗೇ ಬಯ್ಯುತ್ತೇನೆ. ಯಾವ ಚರ್ಚೆಗೂ ನಾನು ಸಿದ್ಧ ಎಂದು ಹೇಳಿದರು.
ಚಕ್ರವರ್ತಿ ಸೂಲಿಬೆಲೆ ನಾನು ವಿವೇಕಾನಂದರ ಬಗ್ಗೆ ಬರೆದಾಗ ನನಗೆ ಜೀವಬೆದರಿಕೆ ಒಡ್ಡಿದ್ದರು. ಆದರೆ ಈ ಬಗ್ಗೆ ನಾನು ಆತನಿಗೆ ಸವಾಲು ಹಾಕಿದ್ದೆ. ಒಂದೇ ವೇದಿಕೆಯಲ್ಲಿ ನಿಂತು ನಾನು ವಿವೇಕಾನಂದರ ಬಗ್ಗೆ ಮಾತನಾಡುತ್ತೇನೆ. ನೀನೂ ಮಾತನಾಡು ಎಂದು ಸವಾಲು ಹಾಕಿದ್ದೆ ಎಂದು ತಿಳಿಸಿದರು.
ಚಕ್ರವರ್ತಿ ಸೂಲಿಬೆಲೆ ಯಾವ ಸಭೆಗೂ ಬಂದಿಲ್ಲ. ಆತ ಒಬ್ಬ ಹೇಡಿ. ಆದರೆ ಮುಸ್ಲಿಮರ ಸಮಾವೇಶದಲ್ಲಿ ನಾನು ಸೂಲಿಬೆಲೆಗೆ ಬಯ್ಯುವುದಿಲ್ಲ. ಬದಲಾಗಿ ಮುಸ್ಲಿಮರನ್ನೇ ಟೀಕಿಸುತ್ತೇನ ಎಂದು ಅಮೀನ್ ಮಟ್ಟು ಹೇಳಿದ್ದಾರೆ.