ಬೆಂಗಳೂರು, ಅ18(SS): ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ಇಳಿಕೆಯಾಗಿದೆ. ಆಯುಧ ಪೂಜೆ ದಿನದಂದೇ ಪ್ರತಿ ಲೀಟರ್ ಪೆಟ್ರೋಲ್ ಬೆಲೆಯಲ್ಲಿ ಪ್ರತಿ ಲೀಟರ್ ಮೇಲೆ 21 ಪೈಸೆ, ಹಾಗೂ ಡೀಸೆಲ್ ಬೆಲೆ ಮೇಲೆ 11 ಪೈಸೆ ಇಳಿಕೆಯಾಗಿದೆ.
ಅ.05ರಂದು ಪೆಟ್ರೋಲ್ ಹಾಗೂ ಡೀಸೆಲ್ ಮೇಲೆ ಅಬಕಾರಿ ಸುಂಕ 1.50 ರು ಪ್ರತೀ ಲೀಟರ್ ನಷ್ಟು ಕೇಂದ್ರ ಸರ್ಕಾರ ಇಳಿಕೆ ಮಾಡಿತ್ತು. ತೈಲ ಕಂಪನಿಗಳು 1 ರು ಸಬ್ಸಿಡಿಯನ್ನು ತಗ್ಗಿಸಿದ್ದವು, ಹೀಗಾಗಿ, 2.50ರು ಪ್ರತಿ ಲೀಟರ್ ಇಳಿಕೆಯಾಗಿತ್ತು. ಬೆಂಗಳೂರಿನಲ್ಲಿ ಪ್ರತಿ ಲೀ. ಪೆಟ್ರೋಲ್ 22 ಪೈಸೆ ಇಳಿಕೆಯೊಂದಿಗೆ 83.27 ರೂ. ಇದ್ದು, 11 ಪೈಸೆ ಇಳಿಕೆ ಕಂಡಿರುವ ಡೀಸೆಲ್ 75.97 ರೂ ಆಗಿದೆ.
ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಪ್ರತಿ ಲೀ. 82.62 ರೂ.ಗಳಷ್ಟಾಗಿದೆ. ಡೀಸೆಲ್ ದರ 75.58 ರು ಪ್ರತಿ ಲೀಟರ್ ನಷ್ಟಿದೆ. ಮುಂಬೈನಲ್ಲಿ 21 ಪೈಸೆಗಳ ಇಳಿಕೆ ಕಂಡುಬಂದಿದ್ದು, ಪ್ರತಿ ಲೀ. 88.62 ರೂ. ಗೆ ಮಾರಾಟವಾಗುತ್ತಿದೆ. ಮುಂಬೈನಲ್ಲಿ 79.24 ರೂ.ಗಳಷ್ಟಿದೆ.
ಕೆಲವು ದಿನಗಳಿಂದ ಗಗನಮುಖಿಯಾಗಿ ಜನಸಾಮಾನ್ಯರ ಹೊರೆಯಾಗಿದ್ದ ಪೆಟ್ರೋಲ್ ಬೆಲೆ ವಿಜಯದಶಮಿ ಹಬ್ಬದ ಸಂದರ್ಭದಲ್ಲಿ ತುಸು ಕಡಿಮೆಯಾಗಿದೆ.