ಮೈಸೂರು, ಅ 18(SM): ಸುಪ್ರೀಂಕೋರ್ಟ್ ಇತ್ತೀಚೆಗಷ್ಟೇ ಶಬರಿಮಲೆಗೆ ಎಲ್ಲಾ ವಯೋಮಾನದ ಮಹಿಳೆಯರ ಪ್ರವೇಶ ಕುರಿತು ನೀಡಿರುವ ತೀರ್ಪನ್ನು ಕೂಡಲೇ ಮರುಪರಿಶೀಲಿಸಬೇಕು ಎಂದು ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ ಆಗ್ರಹಿಸಿದರು.
ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಧರ್ಮಗ್ರಂಥ ಆಧಾರಿತ ಮತಗಳ ಕನ್ನಡಕ ಹಾಕಿಕೊಂಡು ನ್ಯಾಯಾಲಯಗಳು, ನಂಬಿಕೆ, ವಿಶ್ವಾಸ, ವಿಧಿ-ವಿಧಾನ, ಆಚಾರ-ವಿಚಾರಗಳ ಆಧಾರಿತವಾಗಿರುವಂತಹ ಹಿಂದೂ ಧರ್ಮವನ್ನು ನೋಡಿ ತೀರ್ಪು ಕೊಡಲು ಪ್ರಾರಂಭವಾಗಿರುವುದರಿಂದ ಈ ಸಮಸ್ಯೆ ಆರಂಭವಾಗಿದೆ.
ಭಾರತದಲ್ಲಿ ಅಥವಾ ಮೆಕ್ಕಾದಲ್ಲಿದ್ದರೂ ಅದೇ ಸಂಪ್ರದಾಯವನ್ನು ಮುಂದುವರೆಸಿಕೊಂಡು ಹೋಗುತ್ತಿದ್ದಾರೆ. ಆದರೆ, ಹಿಂದೂ ಧರ್ಮ ಹಾಗಲ್ಲ. ಈ ಧರ್ಮಕ್ಕೆ ಯಾರು ಪ್ರವಾದಿ ಇಲ್ಲ. ವಿಶ್ವಾಸ, ಆಚಾರ,-ವಿಚಾರ ಪರಂಪರಗತವಾಗಿ ನಡೆದುಕೊಂಡ ಬಂದಂತಹ ಒಂದು ಪದ್ಧತಿಗಳಲ್ಲಿ ಹಿಂದೂ ಧರ್ಮವಿದೆ. ಇದನ್ನು ಅರ್ಥ ಮಾಡಿಕೊಳ್ಳದೆ ಸುಪ್ರೀಂಕೋರ್ಟ್ ಈ ರೀತಿ ತೀರ್ಪು ಕೊಟ್ಟಿರುವುದು ಬಹಳ ದೊಡ್ಡ ಗೊಂದಲಕ್ಕೆ ಕಾರಣವಾಗಿದೆ ಎಂದರು.
ಶಬರಿಮಲೆ ಸುತ್ತ ನಾಲ್ಕು ಪ್ರದೇಶಗಳಲ್ಲಿ ನಿಷೇಧಾಜ್ಞೆ ಜಾರಿಗೊಳಿಸಿದ ಡಿಸಿ ಸಮಾನತೆ ಹಿಂದೂ ಧರ್ಮದಲ್ಲಿ ಹಾಸುಹೊಕ್ಕಾಗಿದೆ. ಶಬರಿಮಲೆಗೆ ಮಹಿಳೆಯರ ಪ್ರವೇಶದಿಂದ ಅದು ಸಾಬೀತಾಗಬೇಕಿಲ್ಲ. ಶಬರಿಮಲೆ ಅಯ್ಯಪ್ಪ ನೈತಿಕ ಬ್ರಹ್ಮಚಾರಿ. ಹೀಗಾಗಿ ಮಹಿಳೆಯರಿಗೆ ಪ್ರವೇಶ ಇಲ್ಲ ಅಷ್ಟೆ. 10 ವರ್ಷದೊಳಗೆ 50 ವರ್ಷ ಮೇಲ್ಪಟ್ಟ ಮಹಿಳೆಯರಿಗೆ ಪ್ರವೇಶಾವಕಾಶವಿದೆ. ಇದರಲ್ಲಿ ಸಮಾನತೆಯ ಪ್ರಶ್ನೆಯೇ ಇಲ್ಲ ಎಂದು ಕಿಡಿಕಾರಿದರು.