ಬೈಂದೂರು, ಅ 18(SM): ಶಿವಮೊಗ್ಗ ಲೋಕಸಭೆ ಉಪ ಚುನಾವಣೆ ಹಿನ್ನೆಲೆ ಕಣದಲ್ಲಿರುವ ಅಭ್ಯರ್ಥಿ ಪುತ್ರ ರಾಘವೇಂದ್ರ ಪರ ಬೈಂದೂರಿನಲ್ಲಿ ಮಾಜಿ ಸಿಎಂ ಯಡಿಯೂರಪ್ಪ ಪ್ರಚಾರ ಕಾರ್ಯ ನಡೆಸಿದ್ದಾರೆ.
ತಮ್ಮ ಪ್ರಚಾರ ಭಾಷಣದಲ್ಲಿ ಕಾಂಗ್ರೆಸ್ ಹಾಗೂ ಜಲಸಂಪನ್ಮೂಲ ಸಚಿವ ಡಿಕೆ ಶಿವಕುಮಾರ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಈಗಲಾದರೂ ಡಿಕೆ ಶಿವಕುಮಾರ್ ಗೆ ತನ್ನ ತಪ್ಪಿನ ಅರಿವಾಗಿರೋದು ಸಂತೋಷದ ವಿಚಾರ. ವೀರಶೈವ-ಲಿಂಗಾಯತ ಅಂತ ಗೊಂದಲ ಮಾಡಿ ಹಿನ್ನಡೆಯಾಗಿದ್ದನ್ನು ಒಪ್ಪಿಕೊಂಡಿದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ.
ಇನ್ನು ಮುಂದೆ ಜಾತಿ-ಧರ್ಮದ ವಿಚಾರದಲ್ಲಿ ಗೊಂದಲ ಮಾಡೋದು ಬಿಡಿ.ರಾಜಕೀಯ ಮಾಡೋಣ. ಆದರೆ ಜಾತಿ ಮತ್ತು ಸಮಾಜ ಒಡೆಯುವ ಕೆಲಸ ಯಾರೂ ಮಾಡಬಾರದು.ಜಾತಿ ಒಡೆದು ಕಾಂಗ್ರೇಸ್ ಕೈಸುಟ್ಟುಕೊಂಡಿದೆ ಎಂದು ಮಾತಿನ ಬಾಣವನ್ನು ಯಡಿಯೂರಪ್ಪ ಬಿಟ್ಟಿದ್ದಾರೆ.