ಮಂಗಳೂರು, ಅ19(SS): ಸಿದ್ದರಾಮಯ್ಯ ಅವರು ತಮ್ಮ ನಿರ್ಧಾರವನ್ನು ಬದಲಾಯಿ, ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸಲಿದ್ದಾರೆ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಗ್ರಾಹಕರ ವ್ಯವಹಾರಗಳ ಸಚಿವ ಜಮೀರ್ ಅಹಮದ್ ಖಾನ್ ತಿಳಿಸಿದ್ದಾರೆ.
ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಅವರ ರಾಜಕೀಯ ನಿವೃತ್ತಿಯನ್ನು ಜನ ಒಪ್ಪುವುದಿಲ್ಲ. ಸಿದ್ದರಾಮಯ್ಯ ಮುಂದಿನ ಚುನಾವಣೆಗೆ ಸ್ಪರ್ಧಿಸುತ್ತಾರೆ. ಅವರು ಚುನಾವಣೆಗೆ ನಿಲ್ಲದಿದ್ದರೆ ಜನ ಬಿಡಬೇಕಲ್ಲ. ಅದನ್ನು ಜನ ಒಪ್ಪುವುದುದಿಲ್ಲ ಎಂದು ಹೇಳಿದರು.
ಸಿದ್ದರಾಮಯ್ಯ ಅವರು ತಮ್ಮ ನಿರ್ಧಾರವನ್ನು ಬದಲಾಯಿಸಲಿದ್ದಾರೆ. ನಮಗೂ ಸಿದ್ದರಾಮಯ್ಯ ಅವರು ಬೇಕೇ ಬೇಕು. ಕೇಂದ್ರ ಸಚಿವ ಸ್ಥಾನಕ್ಕೆ ಅಕ್ಬರ್ ಈ ಹಿಂದೆಯೇ ರಾಜೀನಾಮೆ ನೀಡಬೇಕಿತ್ತು. ಇಷ್ಟೆಲ್ಲಾ ವಿವಾದ ಆದ ಮೇಲೆ ಛೀಮಾರಿ ಹಾಕಿಸಿಕೊಂಡು ರಾಜೀನಾಮೆ ಕೊಡಬೇಕಾಗಿತ್ತಾ..? ಎಂದು ಪ್ರಶ್ನಿಸಿದರು.
ರಾಜಕೀಯದಿಂದ ಯಾವ ರಾಜಕಾರಣಿ ಈವರೆಗೆ ನಿವೃತ್ತಿಯಾಗಿದ್ದಾರೆ. ಮಾಜಿ ಪ್ರಧಾನಿ ದೇವೇಗೌಡರು ಈ ಹಿಂದೆ ಚುನಾವಣೆಗೆ ನಿಲ್ಲುವುದಿಲ್ಲ ಎಂದಿದ್ದರು. ಆದರೆ ಅವರು ಮತ್ತೆ ಚುನಾವಣೆಗೆ ನಿಂತರು. ತಮ್ಮ ನಿಲುವನ್ನು ಬದಲಾಯಿಸಿದರು. ಹಾಗಾಗಿ ಸಿದ್ದರಾಮಯ್ಯ ಅವರು ಕೂಡ ತಮ್ಮ ನಿರ್ಧಾರವನ್ನು ಬದಲಾಯಿಸಲಿದ್ದಾರೆ ಎಂದು ತಿಳಿಸಿದರು.