ತಿರುವನಂತಪುರಂ, ಅ19(SS): ಸುಮಾರು 200 ಪೊಲೀಸರ ಸರ್ಪಗಾವಲಿನಲ್ಲಿ ಕೊಚ್ಚಿ ಮೂಲದ ಇಬ್ಬರು ಮಹಿಳೆಯರು ಹಿಂದೂ ಧಾರ್ಮಿಕ ಕ್ಷೇತ್ರ ಶಬರಿಮಲೆ ಅಯ್ಯಪ್ಪಸ್ವಾಮಿ ದೇಗುಲದತ್ತ ಹೆಜ್ಜೆ ಹಾಕಿದ್ದು. ದೇಗುಲದ ಆವರಣವನ್ನು ಮಹಿಳೆಯರು ತಲುವಷ್ಟರಲ್ಲಿ ಭಕ್ತಾದಿಗಳ ಪ್ರತಿಭಟನೆ ಹೆಚ್ಚಾದ ಹಿನ್ನಲೆ, ದೇವಾಲಯ ಪ್ರವೇಶಿಸದೇ ಮಹಿಳೆಯರು ವಾಪಸ್ ಬಂದಿದ್ದಾರೆ ಎನ್ನುವ ಮಾಹಿತಿ ವರದಿಯಾಗಿದೆ.
ಸೆ.28ರಂದು 10ರಿಂದ-50 ವರ್ಷದವರೆಗಿನ ಎಲ್ಲರೂ ಶಬರಿಮಲೆ ದೇಗುಲಕ್ಕೆ ಪ್ರವೇಶಿಸಿ ಅಯ್ಯಪ್ಪನ ದರ್ಶನ ಪಡೆಯಬಹುದೆಂಬ ಮಹತ್ವದ ತೀರ್ಪು ಕೋರ್ಟ್ ನೀಡಿತ್ತು. ಈ ಹಿನ್ನೆಲೆ, ಭಾರೀ ಪೊಲೀಸ್ ಬಂದೋಬಸ್ತ್ ನಡುವೆ ಹೆಲ್ಮೆಟ್ ಧರಿಸಿ, ಪೊಲೀಸರಂತೆ ವೇಷ ಧರಿಸಿ ಹೈದರಾಬಾದ್ ಮೂಲದ ಪತ್ರಕರ್ತೆ ಮತ್ತು ಇನ್ನೊಬ್ಬ ಮಹಿಳೆ ದೇವಾಲಯ ಪ್ರವೇಶಕ್ಕೆ ಮುಂದಾಗಿದ್ದರು. ಆದರೆ ಈ ಪ್ರಯತ್ನ ಕೊನೆ ಕ್ಷಣದಲ್ಲಿ ವಿಫಲವಾಗಿದೆ ಎಂಬ ಮಾಹಿತಿ ಲಭಿಸಿದೆ.
ಮೊಜೋ ಟಿವಿಯ ಕವಿತಾ ಜಕ್ಕಾಲ ಮತ್ತು ರಹನಾ ಫಾತಿಮಾ ಎನ್ನುವ ಮಹಿಳೆ ದೇವಾಲಯ ಪ್ರವೇಶಕ್ಕೆ ಮುಂದಾದವರು ಎಂದು ತಿಳಿದುಬಂದಿದೆ.
ಸರ್ವೋಚ್ಛ ನ್ಯಾಯಾಲಯದ ಆದೇಶದ ವಿರುದ್ಧ ಭಾರಿ ಪ್ರತಿಭಟನೆಗಳು ನಡೆಯುತ್ತಿರುವುದರಿಂದ ಇಲ್ಲವುಂಗಳ್ ಹಾಗೂ ಸನ್ನಿದಾನಂ ಪ್ರದೇಶಗಳ ಸುತ್ತಮುತ್ತ ಹಾಗೂ ಪಥನಂಥಿಟ್ಟ ಜಿಲ್ಲಾಡಳಿತ ನಿನ್ನೆಯಿಂದ ಕರ್ಫ್ಯೂ ಜಾರಿಯಲ್ಲಿದ್ದು, ಇಂದೂ ಸಹ ಮುಂದುವರಿಯಲಿದೆ. ಈ ನಡುವೆಯೇ ಕೇರಳದ ಅನೇಕ ಕಡೆ ಬಸ್ಗಳಿಗೆ ಕಲ್ಲು ತೂರಾಟ ನಡೆದಿದೆ.