ಶ್ರೀನಗರ, ಅ 10: ಜೈಶ್–ಎ–ಮಹಮ್ಮದ್ ಉಗ್ರ ಸಂಘಟನೆಯ ಪ್ರಮುಖ ಕಮಾಂಡರ್ ಉಮರ್ ಖಾಲೀದ್ನನ್ನು ಭದ್ರತೆ ಪಡೆ ಹತ್ಯೆಗೈದಿದೆ.
ಜಮ್ಮು ಕಾಶ್ಮೀರದ ಲಡೋರಾದಲ್ಲಿ ಖಾಲೀದ್ ಮತ್ತು ಭದ್ರತಾ ನಡುವೆ ಗುಂಡಿನ ಚಕಮಕಿ ನಡೆದಿದ್ದು, ದಾಳಿಗೆ ಪ್ರತಿಯಾಗಿ ಉಮರ್ ಖಾಲೀದ್ನನ್ನು ಭದ್ರತೆ ಪಡೆ ಹತ್ಯೆಗೈದಿದೆ. ಹತ್ಯೆಯಾಗಿರುವ ಉಮರ್ ಖಾಲೀದ್ ಜೈಶ್–ಎ–ಮಹಮ್ಮದ್ ಉಗ್ರ ಸಂಘಟನೆಯ ಪ್ರಮುಖ ಕಮಾಂಡರ್ ಎಂದು ತಿಳಿದು ಬಂದಿದೆ.
ಭದ್ರತಾ ಪಡೆಯ ಗುಂಡೇಟಿಗೆ ಬಲಿಯಾಗಿರುವ ಖಾಲೀದ್ ಸೇರಿದಂತೆ 12 ಮಂದಿ ಉಗ್ರರು ಕೆಲ ದಿನಗಳ ಹಿಂದೆ ಭಾರತದ ಗಡಿಯೊಳಗೆ ನುಸುಳುವ ಪ್ರಯತ್ನ ನಡೆಸಿದ್ದರು. ಆದರೆ ಉಗ್ರರ ಪ್ರಯತ್ನ ವಿಫಲವಾಗಿದ್ದು, ಜಮ್ಮುಕಾಶ್ಮೀರದ ಪೊಲೀಸರ ವಿಶೇಷ ಕಾರ್ಯಾಚರಣೆ ಪಡೆ, ಸ್ಥಳೀಯ ಪೊಲೀಸರು ಹಾಗೂ ಸಿಆರ್ಪಿಎಫ್ ಪಡೆ ಜಂಟಿ ಕಾರ್ಯಾಚರಣೆಯಿಂದ ಉಗ್ರ ಉಮರ್ ಖಾಲೀದ್ನನ್ನು ಹತ್ಯೆಗೈಯ್ಯಲಾಗಿದೆ.