ಉಡುಪಿ, ಅ : ರೈಲು ಡಿಕ್ಕಿಯಾಗಿ ವೃದ್ದ ಮಹಿಳೆಯೊಬ್ಬರು ಸಾವನ್ನಪ್ಪಿದ ಘಟನೆ ಇಂದು ಉಡುಪಿಯ ಇಂದ್ರಾಳಿಯ ರೈಲ್ವೇ ಟ್ರ್ಯಾಕ್ನಲ್ಲಿ ನಡೆದಿದೆ. ಕೊಪ್ಪ ಮೂಲದ ನಿವಾಸಿ ಇಂದ್ರ , ಮೃತ ಮಹಿಳೆ. ಸೋಮವಾರ ಬೆಳಗ್ಗೆ ಉಡುಪಿಯಲ್ಲಿರುವ ತನ್ನ ಮನೆಗೆ ಬರುವ ವೇಳೆ ಈ ದುರ್ಘಟನೆ ಸಂಭವಿಸಿದೆ. ಉಡುಪಿ ಇಂದ್ರಾಳಿಯಿಂದ ದೊಡ್ಡಣಗುಡ್ಡೆಯಲ್ಲಿರುವ ತಮ್ಮನ ಮನೆಗೆ ಕಾಲು ದಾರಿಯಾಗಿ ರೈಲ್ವೇ ಟ್ರ್ಯಾಕ್ ಮೂಲಕ ನಡೆದುಕೊಂಡು ಬಂದಿದ್ದಾರೆ ಎನ್ನಲಾಗಿದೆ. ರೈಲು ಡಿಕ್ಕಿಹೊಡೆದ ರಭಸಕ್ಕೆ ಇಂದ್ರ ಅವರ ಕೈ ಮುರಿಯಲ್ಪಟ್ಟಿದೆ. ಬಸ್ನಿಂದ ಇಳಿದು ಬಂದ ಇಂದ್ರ ಅವರು ಮನೆಗೆ ಬಾರದೇ ಕಾಣೆಯಾಗಿದ್ದನ್ನು ಮನಗಂಡ ಅವರ ತಮ್ಮಂದಿರು ಹುಡುಕಾಟ ನಡೆಸಿದ್ದಾರೆ. ಇಂದ್ರ ಅವರ ದೂರವಾಣಿಗೆ ಕರೆ ಮಾಡಿದಾಗ ಇಂದ್ರ ಅವರ ಮೊಬೈಲ್ ರೈಲ್ವೇಟ್ರ್ಯಾಕ್ ನಲ್ಲಿರುವ ಇರುವ ಮಾಹಿತಿ ಲಭಿಸಿದೆ. ಸ್ಥಳಕ್ಕೆ ಬಂದು ನೋಡಿದಾಗ ಇಂದ್ರ ಅವರು ರೈಲ್ವೇ ಹಳಿಯ ಬದಿ ಬಿದ್ದು ಸಾವನ್ನಪ್ಪಿದ್ದರು. ಮಣಿಪಾಲ ಪೋಲಿಸರು ಸ್ಥಳಕ್ಕೆ ಆಗಮಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಇನ್ನು ಈ ರೈಲ್ವೇ ಟ್ರ್ಯಾಕ್ ಬಳಿ ವಾಸ ಮಾಡುವ ನಿವಾಸಿಗಳಿಗೆ ಸರಿಯಾದ ದಾರಿ ವ್ಯವಸ್ಥೆ ಇಲ್ಲದೇ ಈ ರೈಲ್ವೇ ಟ್ರ್ಯಾಕ್ ಮುಖಾಂತರವೇ ನಡೆದಾಡುವ ್ವಿಚಾರ ಕೂಡಾ ಬೆಳಕಿಗೆ ಬಂದಿದೆ. ಶಾಲಾ ಮಕ್ಕಳು ಹಾಗೂ ಇಲ್ಲಿಯ ನಾಗರೀಕರು ಈ ರೈಲ್ವೇ ಟ್ರ್ಯಾಕ್ ಮುಖಾಂತರವೇ ಪ್ರತಿ ನಿತ್ಯ ಹಾದು ಹೋಗಬೇಕಾಗಿದೆ. ಈ ಭಾಗದ ಜನರು ರಸ್ತೆಯಿಲ್ಲದೇ ಕಾಲು ದಾರಿಯಾಗಿ ನಡೆದಾಡುತ್ತಿದ್ರೂ ಸಂಬಂದಪಟ್ಟ ಇಲಾಖೆ ಹಾಗೂ ಜನಪ್ರತಿನಿಧಿಗಳು ಮೌನವಹಿಸಿರುವುದು ದುರಂತವೇ ಸರಿ.