ಮಂಗಳೂರು, ಅ 10 : ನಟ ಪ್ರಕಾಶ್ ರೈ ಅವರಿಗೆ ಈ ಪ್ರಶಸ್ತಿ ನೀಡುವ ವಿಚಾರ ಸಾಕಷ್ಟು ಪರ ವಿರೋಧಗಳಿಗೆ ನಡುವೆಯೇ .ಕೋಟ ಶಿವರಾಮ ಕಾರಂತ ಟ್ರಸ್ಟ್ ಹಾಗೂ ಕೋಟತಟ್ಟು ಗ್ರಾಮಪಂಚಾಯತ್ ನೀಡುವ "ಡಾ. ಕಾರಂತ ಹುಟ್ಟೂರ ಪ್ರಶಸ್ತಿ"ಯನ್ನು ಸ್ವೀಕರಿಸಲು ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಟ ಪ್ರಕಾಶ್ ರೈ ಬಂದಿಳಿದಿದ್ದಾರೆ. ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮಾದ್ಯಮದವರೊಂದಿಗೆ ಮಾತನಾಡಿದ ನಟ ರೈ ವಿರೋಧಿಸುವುದು ಅವರ ಪ್ರಜಾಸತ್ತಾತ್ಮಕ ಹಕ್ಕು. ನನ್ನನ್ನು ಪ್ರೀತಿಸಲು ಕೆಲವರಿಗೆ , ಕೆಲವು ಕಾರಣಗಳು ಇರುವಂತೆಯೇ , ಇನ್ನು ಕೆಲವರಿಗೆ ಕಾರಣವೇ ಇಲ್ಲದೇ ಇರಬಹುದು.. ಎನ್ನುವ ಜಾಣ ಉತ್ತರವನ್ನು ನೀಡಿದರು.
ನಟ ಪ್ರಕಾಶ್ ರೈಗೆ ಕೋಟಾ ಶಿವರಾಮ ಕಾರಂತ ಪ್ರಶಸ್ತಿ ವಿಚಾರ ಬಾರೀ ವಿರೋಧಕ್ಕೆ ಕಾರಣವಾಗಿರುವುದರಿಂದ ವಿಮಾನ ನಿಲ್ದಾಣದಲ್ಲಿ ಭಾರೀ ಬಂದೋಬಸ್ಥ್ ಮಾಡಲಾಗಿತ್ತು. ಆ ಬಳಿಕ ಪೊಲೀಸ್ ಭದ್ರತೆಯೊಂದಿಗೆ ಪ್ರಕಾಶ್ ರೈ, ಕೋ ಉಡುಪಿಯ ಕೋಟ ಕಡೆಗೆ ತೆರಳಿದರು. ಈ ನಡುವೆ ಎಲ್ಲಾ ಮುಜುಗರದಿಂದ ತಪ್ಪಿಸಲು ಈ ಹಿಂದೆ ಪ್ರಶಸ್ತಿ ಪ್ರಧಾನ ಸಮಾರಂಭದ ನೇತೃತ್ವವನ್ನ ವಹಿಸಿಕೊಂಡಿರುವುದು ಕೋಟ ಶ್ರೀನಿವಾಸ ಪೂಜಾರಿ ಕಾರ್ಯಕ್ರಮಕ್ಕೆ ಗೈರುಹಾಜರಾಗಿದ್ದಾರೆ.