ಕಾಸರಗೋಡು, ಅ 21 (MSP): ಕೇರಳ ಹರತಾಳ ದಿನದಂದು ಕುಂಬಳೆ ಜುಮಾ ಮಸೀದಿ ಯ ಉರುಸ್ ಸಮಿತಿ ಕಚೇರಿ ಯನ್ನು ಬಲವಂತವಾಗಿ ಮುಚ್ಚಿಸಲೆತ್ನಿಸಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಐವರು ಹಿಂದು ಸಂಘಟನೆಯ ಕಾರ್ಯಕರ್ತರನ್ನು ಕುಂಬಳೆ ಪೊಲೀಸರು ಬಂಧಿಸಿದ್ದಾರೆ.
ಬಂಧಿತರನ್ನು ಬಂಬ್ರಾಣದ ಸಂಜಯ್ (20), ಆರಿಕ್ಕಾಡಿ ಕೋರಿಕಂಡದ ನವೀನ್ ರೈ(22) , ಬಂಬ್ರಾಣ ಚೂರಿತ್ತಡ್ಕದ ರಾಜೇಶ್ (21) , ಕೊಯಿಪ್ಪಾಡಿ ಕಡಪ್ಪುರದ ಅಖಿಲೇಶ್ (21) ಮತ್ತು ಕಳತ್ತೂರು ಚೆಕ್ ಪೋಸ್ಟ್ ನ ಪ್ರವೀಣ್ (36) ಮತ್ತು ಬಂಬ್ರಾಣದ ರೋಹಿತ್ ಪೂಜಾರಿ (26) ಎಂದು ಗುರುತಿಸಲಾಗಿದೆ.
ಹರತಾಳದ ಹಿನ್ನಲೆಯಲ್ಲಿ ಅ.25 ರ ಗುರುವಾರದಂದು ಕುಂಬಳೆ ಪೇಟೆಯಲ್ಲಿ ಬಲವಂತವಾಗಿ ಅಂಗಡಿ ಮುಂಗಟ್ಟುಗಳನ್ನು ಮುಚ್ಚಿಸಿದ ತಂಡವು ಉರುಸ್ ಸಮಿತಿ ಕಚೇರಿ ಮುಚ್ಚಿಸಲೆತ್ನಿಸಿ ಕಚೇರಿಯಲ್ಲಿದ್ದ ನಾಲ್ವರನ್ನು ಹೊರಕ್ಕೆ ತಳ್ಳಿ ಗಾಜನ್ನು ಪುಡಿಗೈಯ್ಯಲು ಯತ್ನಿಸಿದ್ದು, ಪ್ರಕರಣಕ್ಕೆ ಸಂಬಂಧಪಟ್ಟಂತೆ 25 ಮಂದಿ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು.