ಮಂಗಳೂರು, ಅ 10: ಅಖಿಲ ಭಾರತ ಪೆಟ್ರೋಲಿಯಂ ವರ್ತಕರ ಸಂಘ ಅಕ್ಟೋಬರ್ 13 ರಂದು ಕರೆ ನೀಡಿರುವ "ನೋ ಪರ್ಚೇಸ್, ನೋ ಸೇಲ್" ಪ್ರತಿಭಟನೆಗೆ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ಪೆಟ್ರೋಲಿಯಂ ವರ್ತಕರ ಸಂಘ ಬೆಂಬಲ ಸೂಚಿಸಿದೆ. ಹೀಗಾಗಿ ಅಕ್ಟೋಬರ್ 12 ರ ಮದ್ಯರಾತ್ರಿಯಿಂದ, ಅಕ್ಟೋಬರ್ 13 ರ ಮದ್ಯರಾತ್ರಿಯವರೆಗೆ ಜಿಲ್ಲೆಯ ಸಹಿತ ರಾಷ್ಟ್ರವ್ಯಾಪ್ತಿ ಪೆಟ್ರೋಲ್- ಡೀಸಿಲ್ ಮಾರಾಟ ಇರೋದಿಲ್ಲ. ಈ ಬಗ್ಗೆ ಪತ್ರಿಕಾಗೋಷ್ಟಿ ನಡೆಸಿ ಮಾತನಾಡಿದ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ಪೆಟ್ರೋಲಿಯಂ ವರ್ತಕರ ಸಂಘದ ಅಧ್ಯಕ್ಷ ಸತೀಶ್ ಎನ್ ಕಾಮತ್ ,ಪೆಟ್ರೋಲಿಯಂ ಉತ್ಪನ್ನಗಳಾದ ಪೆಟ್ರೋಲ್ ಮತ್ತು ಡೀಸಿಲ್ ನ್ನು ಜಿ ಎಸ್ ಟಿ ವ್ಯಾಪ್ತಿಗೆ ತರಬೇಕು ಆ ಮೂಲಕ ಒಂದು ರಾಷ್ಟ್ರ ಒಂದು ತೈಲದರ ನಿಗದಿಪಡಿಸೋದು, ನಿತ್ಯ ದರ ಪರಿಷ್ಕರಣೆ ಯನ್ನು ಹಿಂದೆಗೆದುಕೊಳ್ಳುವುದು,4-11-2015 ರ ಜಂಟಿ ಒಪ್ಪಂದ ಪ್ರಕಾರ ತೈಲ ಕಂಪನಿಗಳು ಒಪ್ಪಿಕೊಂಡಂತಹ ಸವಲತ್ತು ಕೂಡಲೇ ಜಾರಿಗೊಳಿಸುವುದು ಮುಂತಾದ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಈ ಪ್ರತಿಭಟನೆಗೆ ಕರೆಕೊಟ್ಟಿದ್ದು, ಒಂದು ವೇಳೆ ಈ ಎಲ್ಲಾ ಬೇಡಿಕೆಗಳು ಇಡೇರದೆ ಇದ್ದರೆ ಅಕ್ಟೋಬರ್ 27 ರ ಬಳಿಕ ಅನಿರ್ದಿಷ್ಟಾವಧಿ ಮುಷ್ಕರ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.