ಉಡುಪಿ, ಅ 22(SM): ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಮಾಜಿ ಪಿಎಂ ದೇವೇಗೌಡರ ಹೊಸದಾದ ಸ್ನೇಹ ಕಾಂಗ್ರೆಸ್ ಪಾಲಿಗೆ ದೃತರಾಷ್ಟ್ರನ ಆಲಿಂಗನವಾಗಿದೆ ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ ಲೇವಡಿ ಮಾಡಿದ್ದಾರೆ. ಅವರು ಸೋಮವಾರ ಉಡುಪಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ಬಿಜೆಪಿಯ ಗೆಲುವಿನ ಮಟ್ಟ ತಡೆಗಟ್ಟಲು ಕಾಂಗ್ರೆಸ್ ಹಾಗೂ ಜೆಡಿಎಸ್ ಉಪ ಚುನಾವಣೆಯಲ್ಲಿ ಮತ್ತೇ ದೋಸ್ತಿ ಬೆಳೆಸಿಕೊಂಡಿದೆ. ಬಿಜೆಪಿ ಚುನಾವಣೆಯಲ್ಲಿ ಗೆಲುತ್ತೇ ಎಂಬ ಕಾರಣಕ್ಕಾಗಿ ಶತಮಾನಗಳನ್ನು ಕಂಡಂತಹ ರಾಷ್ಟ್ರೀಯ ಪಕ್ಷ ಕಾಂಗ್ರೆಸ್, ಜೆಡಿಎಸ್ ನೊಂದಿಗೆ ಕೈ ಜೋಡಿಸಿದೆ. ಸಿದ್ದರಾಮಯ್ಯ ಹಾಗೂ ದೇವೆಗೌಡರು ಮತ್ತೆ ಒಂದಾಗಿದ್ದಾರೆ. ಸಿದ್ದರಾಮಯ್ಯ ಹಾಗೂ ದೇವೆಗೌಡರ ದೋಸ್ತಿ ಕಾಂಗ್ರೆಸ್ ಪಾಲಿಗೆ ದೃತರಾಷ್ಟ್ರನ ಆಲಿಂಗನವಾಗಲಿದೆ ಎಂದು ವ್ಯಂಗ್ಯವಾಡಿದ್ದಾರೆ.
ಶಿವಮೊಗ್ಗ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯೇ ಕಣಕ್ಕೆ ಇಳಿದಿಲ್ಲ. ಬಳ್ಳಾರಿಯಲ್ಲಿ ಕಾಂಗ್ರೆಸ್ ಸೋಲುತ್ತೇ. ಜಮಖಂಡಿ ಹಾಗೂ ರಾಮನಗರದಲ್ಲಿ ಬಿಜೆಪಿಯ ಹೊಸ ಶಕ್ತಿಗಳು ಉಪಚುನಾವಣೆಯಲ್ಲಿ ಪ್ರದರ್ಶನಕ್ಕೆ ಇಳಿದಿವೆ. ಇನ್ನೊಂದಡೆ 2 ಕ್ಷೇತ್ರದಲ್ಲಿ ಕಾಂಗ್ರೆಸ್ ಅತೃಪ್ತರು ಬಂಡಾಯ ಎದಿದ್ದು ಬಿಜೆಪಿಯ ಗೆಲುವಿಗೆ ಇದು ಕಾರಣವಾಗಲಿದೆ. ಬಿಜೆಪಿ ಕರ್ನಾಟಕದಲ್ಲಿ ಕಾಂಗ್ರೆಸ್ನ್ನು ಮುಕ್ತ ಮಾಡಬೇಕು ಎಂಬ ಪಣ ತೊಟ್ಟಿದೆ. ಬಿಜೆಪಿಯ ಈ ಪಣವನ್ನು ದೇವೆಗೌಡರು ಹಾಗೂ ಸಿದ್ದರಾಮಯ ಅವರ ದೋಸ್ತಿಯಿಂದ ಈಡೇರಲಿದೆ ಎಂದು ವಂಗ್ಯವಾಡಿದ್ರು.
ವಿಧಾನಸೌಧದಲ್ಲಿ ಮಂತ್ರಿಗಳು ಯಾರು ಕಾಣುತ್ತಿಲ್ಲ. ಯಾವ ಜಿಲ್ಲೆಗೂ ಸರಕಾರದ ಸಚಿವರು ಭೇಟಿ ನೀಡುತ್ತಿಲ್ಲ. ಕೇವಲ ಚುನಾವಣೆಯ ಬಗ್ಗೆ ಸರಕಾರ ಹಾಗೂ ಮಂತ್ರಿ ಮಂಡಲದ ಸಚಿವರು ಯೋಚಿಸುತ್ತಿದ್ದಾರೆಯೇ ಹೊರತು ಆಡಳಿತದ ಬಗ್ಗೆ ಚಿಂತಯೇ ನಡೆಸುತ್ತಿಲ್ಲ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ತೀರಾ ಹದಗೆಟ್ಟಿದೆ. ಸರಕಾರ ಕಾನೂನು ಸುವ್ಯವಸ್ಥೆಯನ್ನು ಕಾಪಾಡುವಲ್ಲಿ ಸಂಪೂರ್ಣ ವಿಫಲವಾಗಿದೆ ಎಂದು ಟೀಕಿಸಿದರು.