ಮಂಗಳೂರು, ಅ.23 (MSP): ಸ್ಥಳೀಯರು ನೀಡಿದ ಮಾಹಿತಿಯಂತೆ ಕಾರ್ಯಾಚರಣೆ ನಡೆಸಿದ ಮೀನುಗಾರಿಕೆ ಇಲಾಖೆ ಅಧಿಕಾರಿಗಳು, ಪೊಲೀಸರ ಜತೆಗೂಡಿ ಉಳ್ಳಾಲದ ಕೋಟೆಪುರ ಸಮೀಪ ನೇತ್ರಾವತಿ ನದಿ ಕಿನಾರೆಯಲ್ಲಿ ತಮಿಳುನಾಡಿನ 6 ದೋಣಿಗಳನ್ನು ಅ. 23 ರ ಸೋಮವಾರ ವಶಕ್ಕೆ ಪಡೆದಿದ್ದಾರೆ.
ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ ಈ ಸಂದರ್ಭದಲ್ಲಿ ದೋಣಿಗಳಿಗೆ ಸೂಕ್ತ ದಾಖಲೆಗಳು ಇರಲಿಲ್ಲ. ತಮಿಳುನಾಡು ಮೂಲದ ದೋಣಿಗಳು ನಿಷೇಧಿತ ಕಪ್ಪೆ ಬೊಂಡಾಸ್ ಹಿಡಿಯಲು ಇಲ್ಲಿಗೆ ಬಂದಿರಬಹುದು ಎಂಬ ಸಂಶಯ ವ್ಯಕ್ತವಾಗಿದೆ.
ಉಳ್ಳಾಲದಲ್ಲಿ ಅಕ್ರಮವಾಗಿ ದೋಣಿ ಲಂಗರು ಹಾಕಿರುವ ಬಗ್ಗೆ ಮೀನುಗಾರಿಕೆ ಇಲಾಖೆ ಅಧಿಕಾರಿಗಳಿಗೆ ಸ್ಥಳೀಯರು ಮಾಹಿತಿ ರವಾನಿಸಿದ್ದರು. ಪೊಲೀಸರ ಜತೆಗೆ ಸ್ಥಳಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ದಾಖಲಾತಿಗಳು ಇರಲಿಲ್ಲ. ಈ ಕಾರಣದಿಂದ ದೋಣಿಗಳನ್ನು ವಶಕ್ಕೆ ಪಡೆದು, ಕರಾವಳಿ ಕಾವಲು ಪಡೆಗೆ ಹಸ್ತಾಂತರಿಸಲಾಗಿದೆ ಎಂದು ಮೀನುಗಾರಿಕೆ ಇಲಾಖೆ ಉಪನಿರ್ದೇಶಕ ಚಿಕ್ಕವೀರ ನಾಯಕ್ ತಿಳಿಸಿದ್ದಾರೆ.