ಪುಣೆ, ಅ 24 (MSP):ಅಯೋಧ್ಯೆಯಲ್ಲಿ ಶೀಘ್ರದಲ್ಲೇ ರಾಮ ಮಂದಿರ ಪೂರ್ಣಗೊಳ್ಳಬೇಕೆಂದು, ರಾಷ್ಟ್ರೀಯ ಸ್ವಯಂಸೇವಕ ಸಂಘದ ಮುಖ್ಯಸ್ಥ ಮೋಹನ್ ಭಾಗವತ್ ಪುಣೆಯಲ್ಲಿರುವ ದೇಶದ ಶ್ರೀಮಂತ ದೇಗುಲಗಳಲ್ಲಿ ಒಂದಾಗಿರುವ ದಗಡುಸೇಟ್ ಗಣಪತಿ ಮಂದಿರದಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು.
ಟ್ರಸ್ಟ್ನ ಪದಾಧಿಕಾರಿಗಳ ಭಾಗವತ್ ಅವರನ್ನು ದೇವಸ್ಥಾನಕ್ಕೆ ಭೇಟಿ ನೀಡುವಂತೆ ಆಹ್ವಾನ ನೀಡಿದ್ದರು. ಈ ಹಿನ್ನಲೆಯಲ್ಲಿ ದೇವಸ್ಥಾನಕ್ಕೆ ತೆರಳಿದ್ದ ಭಾಗವತ್ ಅಲ್ಲಿ ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ಕಾಲಕಳೆದರು. ಇಲ್ಲಿಗೆ ಬಂದು ದಗಡುಸೇಟ್ ಗಣಪತಿಗೆ ಪಾರ್ಥನೆ ಸಲ್ಲಿಸಬೇಕೆಂಬುದು ನನ್ನ ಬಹುಕಾಲ ಕನಸಾಗಿತ್ತು.ಅದು ಇಂದು ಈಡೇರಿದೆ.ದೇಶದಲ್ಲಿ ರಾಮ ರಾಜ್ಯ ಮರುಕಳಿಸಲು ಅಯೋಧ್ಯೆಯಲ್ಲಿ ಆದಷ್ಟು ಬೇಗ ರಾಮ ಮಂದಿರ ನಿರ್ಮಾಣವಾಗಬೇಕು ಎನ್ನುವ ನನ್ನ ಮನಸ್ಸಿನಲ್ಲಿರುವ ಆಕಾಂಕ್ಷೆಯನ್ನು ದೇವರ ಮುಂದಿಟ್ಟಿದ್ದೇನೆ ಎಂದು ಭಾಗವತ್ ಹೇಳಿದ್ದಾರೆ.
ದಗಡುಸೇಟ್ ಹಲವಾಯಿ ಗಣಪತಿ ದೇವಸ್ಥಾನದ ಉತ್ಸವ ಮುಖ್ಯಸ್ಥ ಹೇಮಂತ್ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿ, ರಾಮಮಂದಿರ ನಿರ್ಮಾಣ ಹಾಗೂ ದೇಶದ ಸಮೃದ್ದಿಗಾಗಿ ವಿಶೇಷವಾಗಿ ಪ್ರಾರ್ಥನೆ ಸ್ಲಲಿಸಿದ ಅವರು ಬಳಿಕ ಹಾಗೂ ದೇವಸ್ಥಾನದ ಟ್ರಸ್ಟಿಗಳೊಂದಿಗೆ ಸಂವಾದ ನಡೆಸಿ ದೇವಸ್ಥಾನದ ಕೆಲಸಗಳನ್ನು ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು ಎಂದರು.