ಮುಂಬೈ, ಅ 25 (MSP): ಬಾಲಿವುಡ್ ಹಿರಿಯ ನಟ ನಾನಾ ಪಾಟೇಕರ್ ವಿರುದ್ಧ ಮೀಟೂ ಆರೋಪ ಮಾಡಿರುವ ತನುಶ್ರೀ ದತ್ತಾ ವಿರುದ್ದ ರಾಖಿ ಸಾವಂತ್ ಕಿಡಿಕಾರಿದ್ದು ತನುಶ್ರೀ ದತ್ತಾ ವಿರುದ್ಧ ಹಲವು ಆರೋಪಗಳನ್ನು ಮಾಡಿದ್ದರು. ಇದಕ್ಕೆ ಇದರಿಂದ ಸಿಡಿದೆದಿದ್ದ, ತನುಶ್ರೀ ದತ್ತಾ ರಾಖಿ ವಿರುದ್ಧ 10 ಕೋಟಿ ರುಪಾಯಿ ಮಾನನಷ್ಟ ಮೊಕದ್ದಮೆಯನ್ನು ದಾಖಲಿಸಿದ್ದರು.
ಇದೀಗ ತನುಶ್ರೀ ದತ್ತಾ ವಿರುದ್ದ ರಾಖಿ ಸಾವಂತ್ ಮತ್ತೊಂದು ಗಂಭೀರ ಆರೋಪ ಮಾಡಿದ್ದು, ಈ ಆರೋಪಕ್ಕೆ ಇಡೀ ಹಿಂದಿ ಚಿತ್ರರಂಗ ಹೌಹಾರಿದೆ. ಈ ಬಗ್ಗೆ ಪತ್ರಿಕಾಗೋಷ್ಟಿ ನಡೆಸಿ ಮಾತನಾಡಿದ ರಾಖಿ ಸಾವಂತ್, ತನುಶ್ರೀ ದತ್ತಾ 12 ವರ್ಷಗಳ ಹಿಂದೆ ಒಳ್ಳೆಯ ಸ್ನೇಹಿತೆಯಾಗಿದ್ದಳು. ಆದರೆ ಆಕೆ ನನ್ನ ಮೇಲೆ 12 ವರ್ಷದ ಹಿಂದೆಯೇ ಸರಣಿ ಅತ್ಯಾಚಾರ ನಡೆಸಿದ್ದಾಳೆ ಎಂದು ಆರೋಪ ಮಾಡಿದ್ದಾರೆ. ಒಮ್ಮೆ ಆಕೆ ನನ್ನನ್ನು ರೇವ್ ಪಾರ್ಟಿಗೆ ಕರೆದುಕೊಂಡು ಹೋಗಿದ್ದಳು. ಅಲ್ಲಿ ಅಮಲು ಭರಿಸುವ ಪದಾರ್ಥ ನೀಡಿ ನನ್ನ ಮೇಲೆ ಅತ್ಯಾಚಾರ ನಡೆಸಿದ್ದಾಳೆ. ತನುಶ್ರೀ ದತ್ತ ಸಲಿಂಗಿಯಾಗಿದ್ದು, ಆಕೆಯ ಒಳಗೊಬ್ಬ ಪುರುಷನಿದ್ದಾನೆ. ನನ್ನೊಂದಿಗೆ ಆಕೆ ಅಸಹ್ಯವಾಗಿ ವರ್ತಿಸಿದ್ದಾಳೆ ಎಂದು ರಾಖಿ ಆರೋಪಿಸಿದ್ದಾಳೆ.
ಈ ಎಲ್ಲಾ ಮಾಹಿತಿ ಬಹಿರಂಗೊಳಿಸಿದಂತೆ ನನಗೆ ಸಾಕಷ್ಟು ಜೀವ ಬೆದರಿಕೆ ಕರೆ ಬರುತ್ತಿವೆ. ಅದನ್ನು ಬೆದರಿಕೆಗಳನ್ನು ನೆನೆದರೆ ನನ್ನ ಕೈ ಕಾಲುಗಳು ಭಯದಿಂದ ನಡುಗುತ್ತಿವೆ. ಹೀಗಾಗಿ ಭಂಡ ದೈರ್ಯದಿಂದ ನಾನು ಪೊಲೀಸ್ ಠಾಣೆಗೆ ದೂರು ನೀಡಿದ್ದೇನೆ ಎಂದು ರಾಖಿ ಸಾವಂತ್ ಅಳಲು ತೋಡಿಕೊಂಡಿದ್ದಾಳೆ. ಈಗ ನನಗೆ ಆಕೆಯ ಹೆಸರು ಹೇಳಲು ಸಹ ಭಯವಾಗುತ್ತಿದೆ. ತನುಶ್ರೀಯೇ ನನ್ನನ್ನು ಬಲತ್ಕಾರ ಮಾಡಿದ್ದು, ಇದು ಆಗಿನ 377 ಕಲಂ ವ್ಯಾಪ್ತಿಗೆ ಇದು ಬರುತ್ತದೆ. ತನುಶ್ರೀ ಹುಡುಗಿಯಲ್ಲ. ಆಕೆ ಮಿಸ್ ಇಂಡಿಯಾ ಆಗಿ ನನ್ನ ಉತ್ತಮ ಸ್ನೇಹಿತಳಾಗಿದ್ದಳು. ಸಿಗರೇಟ್ ನಲ್ಲಿ ತಂಬಾಕು ಖಾಲಿ ಮಾಡಿ ಡ್ರಗ್ಸ್ ಸೇರಿಸಿ, ತಾನು ಸೇವನೆ ಮಾಡಿದ್ದಲ್ಲದೆ, ನನಗೂ ಕೊಡಿಸಿದ್ದಳು, ನಾನು ಗಾಳಿಯಲ್ಲಿ ಹಾರಿಡಿದ್ದೇನೆ ಎಂದು ದೂರಿದ್ದಾಳೆ.
ಪ್ರಧಾನಿ ಮೋದಿ ಅವರು ಬೇಟಿ ಬಚಾವೋ, ಬೇಟಿ ಪಡಾವೋ ಎಂಬ ಅಭಿಯಾನವನ್ನು ಕೈಗೊಂಡಿದ್ದಾರೆ. ನಾನು ಅವರನ್ನು ಕೈಮುಗಿದು ವಿನಂತಿಸುತ್ತೇನೆ ಇದೀಗ ದೇಶದಲ್ಲಿರುವ ಗಂಡಸರನ್ನು ರಕ್ಷಿಸಿ ಎಂದು ಮನವಿ ಮಾಡುತ್ತೇನೆ ಎಂದರು.