ಬೆಳ್ತಂಗಡಿ, ಅ 25(SM): ವೇಣೂರು ಪೊಲೀಸ್ ಠಾಣಾ ವ್ಯಾಪ್ತಿಯ ಹೊಸಂಗಡಿ ಗ್ರಾಮದ ಮನೆಯೊಂದಕ್ಕೆ ನುಗ್ಗಿದ ಖದೀಮರು 2.72 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣವನ್ನು ಕಳವುಗೈದ ಘಟನೆ ನಡೆದಿದೆ.
ಇಲ್ಲಿನ ಲೀಲಾ ಕಾಟೇಜ್ನ ಮಸ್ಕಲ ಮನೆಯ ಕರುಣಾಕರ ಕೋಟ್ಯಾನ್ ಎಂಬುವರ ಮನೆಯ ಹಿಂಬದಿಯ ಬಾಗಿಲಿನಿಂದ ಕಳ್ಳರು ಪ್ರವೇಶಿಸಿ ಕಬ್ಬಿಣದ ಕಪಾಟಿನಲ್ಲಿದ್ದ ಸುಮಾರು 40 ಗ್ರಾಂ ತೂಕದ ಒಂದು ಚಿನ್ನದ ಸರ ಚಿನ್ನದ ನೆಕ್ಲೆಸ್, ಚಿನ್ನದ ಬಳೆ, ಮುತ್ತಿನ ಚಿನ್ನದ ಸರ, ಚಿನ್ನದ ಉಂಗುರ, ಚಿನ್ನದ ಬೆಂಡೋಲೆ ದೋಚಿಕೊಂಡಿದ್ದಾರೆ. ಕೋಟ್ಯಾನ್ ಅವರ ಪತ್ನಿ ಲೀಲಾ ಅವರು ಬೆಳಿಗ್ಗೆ ಎದ್ದಾಗ ಹಿಂದಿನ ಬಾಗಿಲು ಹಾಗೂ ಕಪಾಟು ತೆರೆದಿದ್ದು ನೋಡಿ ಕಳ್ಳತನ ನಡೆದಿದೆ ಎಂದು ತಿಳಿದುಬಂದಿದೆ.
ಘಟನೆಯ ಕುರಿತಂತೆ ವೇಣೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.