ಉಡುಪಿ, ಅ 26(SM): ಜಿಲ್ಲಾ ಮಕ್ಕಳ ರಕ್ಷಣಾ ಘಟಕದಿಂದ ಭಿಕ್ಷಾಟನೆಯಲ್ಲಿ ನಿರತ ಮಕ್ಕಳ ರಕ್ಷಣಾ ಕಾರ್ಯಾಚರಣೆ ನಡೆಸಲಾಗಿದೆ. ಮಣಿಪಾಲ, ಶ್ರೀಕೃಷ್ಣ ಮಠದ ಪರಿಸರ, ಅಂಬಲಪಾಡಿ ದೇವಸ್ಥಾನದ ಮುಂಭಾಗಗಳಲ್ಲಿ ಪುಟ್ಟ ಕಂದಮ್ಮಗಳನ್ನು ಬಳಸಿಕೊಂಡು ಭಿಕ್ಷಾಟನೆ ನಡೆಸುತ್ತಿದ್ದ ಮಹಿಳೆಯರಿಂದ 9 ಮಕ್ಕಳನ್ನು ರಕ್ಷಣೆ ಮಾಡಲಾಗಿದೆ.
ರಕ್ಷಣೆ ಮಾಡಿದ ಪುಟಾಣಿಗಳನ್ನು ನಿಟ್ಟೂರಿನ ಮಕ್ಕಳ ಕಲ್ಯಾಣ ಸಮಿತಿಯ ನ್ಯಾಯಲಯದಲ್ಲಿ ಹಾಜರು ಪಡಿಸಲಾಗಿದೆ. ಹಾಗೂ ಬ್ರಹ್ಮಾವರದಲ್ಲಿ ಮೂವರು ಬಾಲಕಾರ್ಮಿಕರನ್ನು ರಕ್ಷಣೆ ಮಾಡಲಾಗಿದೆ.
ಮಕ್ಕಳ ರಕ್ಷಣಾ ಕಾರ್ಯಚರಣೆಯಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಸಾರ್ವಜನಿಕ ಶಿಕ್ಷಣ ಇಲಾಖೆ, ಉಡುಪಿ ನಗರಸಭೆ, ಕಾರ್ಮಿಕ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಜಿಲ್ಲಾ ಬಾಲಕಾರ್ಮಿಕ ಯೋಜನಾ ಸಂಘ, ಮಣಿಪಾಲ, ಉಡುಪಿ, ಬ್ರಹ್ಮಾವರ ಪೊಲೀಸ್ ಸಿಬ್ಬಂದಿಗಳು ಹಾಗೂ ಉಡುಪಿ ಜಿಲ್ಲಾ ನಾಗರಿಕ ಸಮಿತಿ, ಸಮಾಜ ಕಾರ್ಯ ವಿಭಾಗ ಶಿರ್ವ ಕಾಲೇಜು, ವಿಶ್ವಾಸದ ಮನೆ ಶಂಕರಪುರ, ಜೇಸಿಐ ಉಡುಪಿ- ಬ್ರಹ್ಮಾವರ ಸಂಸ್ಥೆಗಳು ಪಾಲ್ಗೊಂಡಿದ್ದರು.