ಕಾಸರಗೋಡು, ಅ 28 (MSP): ಆರೂವರೆ ವರ್ಷಗಳ ಹಿಂದೆ ನಡೆದ ಕೊಲೆಯೊಂದು ಬೆಳಕಿಗೆ ತರುವಲ್ಲಿ ಕಾಸರಗೋಡು ಪೊಲೀಸರು ಯಶಸ್ವಿಯಾಗಿದ್ದು, ಪತ್ನಿ, ಪ್ರಿಯಕರ ಹಾಗೂ ಅಪ್ರಾಪ್ತ ಪುತ್ರನನ್ನು ಡಿ ಸಿ ಐ ಬಿ ತಂಡ ಬಂಧಿಸಿದೆ.
ಈ ಕುರಿತು ಮಾಹಿತಿ ನೀಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ . ಎ . ಶ್ರೀನಿವಾಸ್ ಸುದ್ದಿಗೋಷ್ಠಿಯಲ್ಲಿ ಯಲ್ಲಿ ಮಾಹಿತಿ ನೀಡಿದರು. ಮೊಗ್ರಾಲ್ ಪುತ್ತೂರು ಬಳ್ಳೂರು ಸ್ಟಾರ್ ನಗರದ ಮುಹಮ್ಮದ್ ಕು೦ಞ (32) ರವರ ಕೊಲೆಗೆ ಸಂಬಂಧಪಟ್ಟಂತೆ ಪತ್ನಿ ಸಕೀನಾ (35), ಈಕೆಯ ಪ್ರಿಯಕರ ಮುಳಿಯಾರು ಬೋವಿಕ್ಕಾನ ಅಳಿಯಡ್ಕದ ಎನ್ . ಎ ಉಮ್ಮರ್ (41) , ಮತ್ತು ಸಕೀನಾಳಾ16 ವರ್ಷದ ಪುತ್ರ ನನ್ನು ಬಂಧಿಸಲಾಗಿದೆ. ಕೊಲೆಗೀಡಾದ ಮುಹಮ್ಮದ್ ಕು೦ಞ ಲಕ್ಷಾಂತರ ರೂ. ಗಳ ಸೊತ್ತು ಹೊಂದಿದ್ದನು. ಈ ಸೊತ್ತನ್ನು ಲಪಟಾಯಿಸಲು ಸಕೀನಾ ಮತ್ತು ಪ್ರಿಯಕರ ಉಮ್ಮರ್ ಸೇರಿ ಕೃತ್ಯ ನಡೆಸಿರುವುದಾಗಿ ತಪ್ಪೊಪ್ಪಿಕೊಂಡಿದ್ದಾರೆ.
ಮನೆಯಲ್ಲಿ ಮಲಗಿದ್ದಾಗ ಶಾಲಿನಿಂದ ಕುತ್ತಿಗೆಗೆ ಬಿಗಿದು ಕೊಲೆಗೈದಿದ್ದು , ಬಳಿಕ ಮೃತದೇಹವನ್ನು ಮೂವರು ಸೇರಿ ಚಂದ್ರಗಿರಿ ಹೊಳೆಗೆ ಎಸೆದಿರುವುದಾಗಿ ಬಂಧಿತರು ತಪ್ಪೊಪ್ಪಿಕೊಂಡಿದ್ದಾರೆ. 2012 ರ ಆಗಸ್ಟ್ ಎಂಟರಂದು ಮುಹಮ್ಮದ್ ಕು೦ಞ ನಾಪತ್ತೆಯಾಗಿರುವುದಾಗಿ ಸಂಬಂಧಿಕ ಮುಹಮ್ಮದ್ ಶಾಫಿ ಕಾಸರಗೋಡು ನಗರ ಠಾಣಾ ಪೊಲೀಸರಿಗೆ ದೂರು ನೀಡಿದ್ದರು. ಪೊಲೀಸರು ತನಿಖೆ ನಡೆಸಿದ್ದರು . ಈ ನಡುವೆ ಕೇರಳ ಹೈಕೋರ್ಟ್ ಹೇಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸಲಾಗಿತ್ತು.
ಈ ಹಿನ್ನಲೆಯಲ್ಲಿ 2012 ರಲ್ಲಿ ಡಿಸೆಂಬರ್ 12 ರಂದು ತನಿಖೆಗಾಗಿ ವಿಶೇಷ ತನಿಖಾ ತಂಡ ರಚನೆಗೆ ಹೈಕೋರ್ಟ್ ಆದೇಶ ನೀಡಿತ್ತು . ಹಿರಿಯ ಅಧಿಕಾರಿ ನೇತೃತ್ವದಲ್ಲಿ ತನಿಖೆ ನಡೆಸಲಾಗಿತ್ತು . 2014 ರ ಏಪ್ರಿಲ್ ನಲ್ಲಿ ಕಾಸರಗೋಡು ಡಿ ಸಿ ಆರ್ ಬಿ ಗೆ ಹಸ್ತಾಂತರಿಸಲಾಗಿತ್ತು . 2014 ರ ಫೆಬ್ರವರಿಯಲ್ಲಿ ಡಿ ಸಿ ಆರ್ ಬಿ ಡಿ ವೈ, ಎಸ್ಪಿ ಪಿ. ಕೆ. ಜೈಸನ್ ಅಧಿಕಾರ ಸ್ವೀಕರಿಸಿದ ಬಳಿಕ ತನಿಖೆಗೆ ಮತ್ತಷ್ಟು ಜೀವ ಲಭಿಸಿತು. ತನಿಖೆ ನಡೆಸಿದಾಗ ಸಕೀನಾ ಮತ್ತು ಪ್ರಿಯಕರನು ಮುಹಮ್ಮದ್ ಕು೦ಞ ನಾಪತ್ತೆಯಲ್ಲಿ ಕೈವಾಡ ಇದೆ ಎಂಬ ಸುಳಿವು ಕೂಡಾ ಲಭಿಸಿತು.ಮುಹಮ್ಮದ್ ಕು೦ಞಯವರ ಮೂರು ಸ್ಥಳಗಳನ್ನು ಆರೋಪಿಗಳು ಮಾರಾಟ ಮಾಡಿರುವುದು ಬೆಳಕಿಗೆ ಬಂದಿತ್ತು . ಬಳಿಕ ಇಬ್ಬರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಕೊಲೆ ಬಯಲಿಗೆ ಬಂದಿದೆ. ಬಂಧಿತ ಉಮ್ಮರ್ ಈ ಹಿಂದೆ ವೇಶ್ಯಾವಾಟಿಕೆ ಪ್ರಕರಣದಲ್ಲಿ ಜೈಲು ಶಿಕ್ಷೆ ಅನುಭವಿಸಿದ್ದನು . ಈತನಿಗೆ ಮೂವರು ಪತಿಯಂದಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಹೆಚ್ಚಿನ ವಿಚಾರಣೆ ನಡೆಯುತ್ತಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ ಎ . ಶ್ರೀನಿವಾಸ್ ತಿಳಿಸಿದ್ದಾರೆ ತನಿಖಾ ತಂಡದಲ್ಲಿ ಡಿ ಸಿ ಆರ್ ಬಿ ಡಿ ವೈ, ಎಸ್ಪಿ ಪಿ . ಕೆ ಜೈಸನ್ , ಸಬ್ ಇನ್ಸ್ ಪೆಕ್ಟರ್ ಪಿ. ವಿ ಶಿವದಾಸನ್, ಶೇಕ್ ಅಬ್ದುಲ್ ರಜಾಕ್ , ಪಿ .ವಿ ಶಶಿ ಕುಮಾರ್ , ಪಿ .ವಿ ಪ್ರಸೀದಾ , ಪ್ರಶಾಂತ್ ಮೊದಲಾದವರಿದ್ದರು