ಮಹಾರಾಷ್ಟ್ರ, ಅ 28 (MSP): ದೇಶದ ಪ್ರಧಾನಿ ನರೇಂದ್ರ ಮೋದಿ ಡೆಂಗ್ಯೂ ಸೊಳ್ಳೆಯಿದ್ದಂತೆ , ಅವರು ಹರಡುವ ರೋಗದಿಂದ ದೇಶದ ಪ್ರಜೆಗಳು ಕಾಯಿಲೆಗೀಡಾಗುತ್ತಿದ್ದಾರೆ ಎಂದು ಮಹಾರಾಷ್ಟ್ರ ಕಾಂಗ್ರೆಸ್ ಶಾಸಕಿ ಪ್ರಣೀತಿ ಶಿಂಧೆಯವರು ಅ.೨೭ರ ಶನಿವಾರ ಹೇಳಿದ್ದಾರೆ.
ಶಾಸಕಿ ಪ್ರಣೀತಿ ಹೇಳಿಕೆ ಬಿಜೆಪಿಗರ ಕೆಂಗಣ್ಣಿಗೆ ಗುರಿಯಾಗಿದ್ದು, ಶಾಸಕಿ ವಿರುದ್ದ ಆಕ್ರೋಶ ವ್ಯಕ್ತವಾಗುತ್ತಿದೆ. ಸೋಲಾಪುರದಲ್ಲಿ ನಡೆದ ಕಾಂಗ್ರೆಸ್ ಕಾರ್ಯಕರ್ತರ ಬೃಹತ್ ಸಭೆಯನ್ನುದ್ದೇಶಿಸಿ ಮಾತನಾಡುವ ಸಂದರ್ಭ ಮೋದಿ ಅವರನ್ನು ಡೆಂಗ್ಯೂ ಸೊಳ್ಳೆ ಹೋಲಿಕೆ ಮಾಡಿ ವ್ಯಂಗ್ಯವಾಡಿದ್ದಾರೆ.
ಮಹಾರಾಷ್ಟ್ರ ಮಾಜಿ ಸಿಎಂ ಸುಶೀಲ್ ಕುಮಾರ್ ಶಿಂಧೆ ಪುತ್ರಿ ಯಾಗಿರುವ ಇವರು ಮಹಾರಾಷ್ಟ್ರದ ಸೊಲ್ಲಾಪು ದಕ್ಷಿಣ ಕ್ಷೇತ್ರದ ಕಾಂಗ್ರೆಸ್ ಶಾಸಕಿಯಾಗಿದ್ದಾರೆ. ನಮ್ಮ ದೇಶದಲ್ಲಿ ಹೊಸ ಡೆಂಗ್ಯೂ ಸೊಳ್ಳೆಯೊಂದು ಕಾಣಿಸಿಕೊಂಡಿದೆ. ಅದರ ಹೆಸರು ಮೋದಿ ಬಾಬಾ. ಅದು ಎಲ್ಲರ ಆರೋಗ್ಯವನ್ನು ಹಾಳು ಮಾಡುತ್ತದೆ. ಇವರಿಂದಾಗಿ ದೇಶವಾಸಿಗಳು ಕಾಯಿಲೆಗೆ ತುತ್ತಾಗುತ್ತಿದ್ದಾರೆ. ಹೀಗಾಗಿ ಕ್ರಿಮಿ ನಾಶಕ ಸಿಂಪಡಿಸಿ ಅದು ಅಧಿಕಾರಕ್ಕೆ ಬರದಂತೆ ತಡೆಯಿರಿ ಎಂದು ಹೇಳಿದ್ದಾರೆ.