ಮಂಗಳೂರು,ಅ 29(MSP): ಎಲ್ಲಾ ಕಡೆ ಮಳೆಗಾಲ ಮುಗಿದು ನಿಧಾನವಾಗಿ ಚಳಿ ಪ್ರಾರಂಭವಾದರೆ ಕರಾವಳಿಯಲ್ಲಿ ಮಾತ್ರ ದಿನದಿಂದ ದಿನಕ್ಕೆ ತಾಪಮಾನದಲ್ಲಿ ಏರಿಕೆ ಕಂಡುಬರುತ್ತಿದೆ. ಕಳೆದ ಐದು ದಿನಗಳಿಂದ ಮಂಗಳೂರಿನ ಉಷ್ಣಾಂಶದಲ್ಲಿ ಏಕಾಏಕಿ ಏರಿಕೆ ಕಂಡಿದೆ. ಮಧ್ಯಾಹ್ನದ ಬಿರು ಬಿಸಿಲಿಗೆ ನಗರದಲ್ಲಿ ಹೊರಗೆ ನಡೆದಾಡುವುದು ಕಷ್ಟವಾಗುತ್ತಿದೆ.
ಭಾನುವಾರ ಪಣಂಬೂರಿನಲ್ಲಿ 35.7 ಡಿಗ್ರಿ ಸೆಲ್ಸಿಯ್ಸ್ ಗರಿಷ್ಟ 21.3 ಕನಿಷ್ಟ ತಾಪಮಾನ ದಾಖಲಾಗಿದೆ. ಮಂಗಳೂರು ವಿಮಾನ ನಿಲ್ಡಾಣದಲ್ಲಿ 34.5 ಡಿಗ್ರಿ ಸೆಲ್ಸಿಯಸ್ ಗರಿಷ್ಟ 21.4 ಡಿಗ್ರಿ ಸೆಲ್ಸಿಯಸ್ ಕನಿಷ್ಟ ಉಷ್ಣಾಂಶ ಕಂಡುಬಂದಿದೆ
ಕರ್ನಾಟಕದಲ್ಲಿ ತಾಪಮಾನದಲ್ಲಿ ಕಾರವಾರದಲ್ಲಿ 38.2 ಡಿಗ್ರಿ ಸೆಲ್ಸಿಯಸ್ ಗರಿಷ್ಠವಿದ್ದು, ಪಣಂಬೂರು ಎರಡನೇ ಸ್ಥಾನದಲ್ಲಿದೆ. ಪಣಂಬೂರಿನ ಗರಿಷ್ಠ ತಾಪಮಾನ ಅಂದಾಜಿಗಿಂತ 4.2 ಡಿ.ಸೆಲ್ಸಿಯಸ್ ಹೆಚ್ಚಿದೆ. ಕನಿಷ್ಟ ತಾಪಮಾನ ಅಂದಾಜಿಗಿಂತ 4.2 ಡಿ. ಸೆಲ್ಸಿಯಸ್ ಹೆಚ್ಚಿದೆ.