ಮಂಗಳೂರು, ಅ 29(MSP): ಕಾವೂರು ಪೊಲೀಸ್ ಠಾಣಾ ವ್ಯಾಪ್ತಿಯ ದಂಬೇಲ್ ಎಂಬಲ್ಲಿ ಇಸ್ಪಿಟ್ ಜೂಜಾಟದಲ್ಲಿ ನಿರತರಾಗಿದ್ದ ಆರೋಪದಲ್ಲಿ ಒಂಬತ್ತು ಮಂದಿ ಆರೋಪಿಗಳನ್ನು ಮಂಗಳೂರು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ದುರ್ಗಪ್ಪ ಗುಡಿಮನಿ(29), ಅಬೂಬಕ್ಕರ್ ಸಿದ್ದಿಕ್ (26), ಮೋಹನ್ ಡಿ.(28), ವಿನೋದ್ ಕುಮಾರ್ (28), ಮುಹಮ್ಮದ್ ಯೂಸುಫ್(46), ಸಂದೇಶ್ ಬಾಳಿಗಾ(29), ಬಾಲಪ್ಪ ಹೊನ್ನಪ್ಪಹೊರಗಿನಮನಿ(27), ಇಸ್ಮಾಯಿಲ್(55) ಹಾಗೂ ಪ್ರವೀಣ್ ಬಂಧಿತ ಆರೋಪಿಗಳಾಗಿದ್ದಾರೆ.
ಆರೋಪಿಗಳು ಇಲ್ಲಿನ ದಂಬೇಲ್ ಎಂಬಲ್ಲಿ ಹಣವನ್ನು ಪಣವಿಟ್ಟು ಅಂದರ್-ಬಾಹರ್ ಜೂಜಾಟದಲ್ಲಿ ನಿರತರಾಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಬಂಧಿತರಿಂದ 30,440 ರೂ. ನಗರದು, ಇಸ್ಪಿಟ್ ಕಾರ್ಡ್, ಟೇಬಲ್ ಗಳ ವಶಪಡಿಸಿಕೊಳ್ಳಲಾಗಿದ್ದು, ಮುಂದಿನ ಕ್ರಮಕ್ಕಾಗಿ ಪ್ರಕರಣವನ್ನು ಕಾವೂರು ಪೊಲೀಸ್ ಠಾಣೆಗೆ ವರ್ಗಾಯಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಸಿಸಿಬಿ ಘಟಕದ ಇನ್ಸ್ ಪೆಕ್ಟರ್ ಶಾಂತರಾಮ, ಪಿಎಸ್ ಐ ಶ್ಯಾಮ ಸುಂದರ್, ಹೆಚ್. ಡಿ ಕಬ್ಬಾಳ್ ರಾಜ್ ಹಾಗೂ ಸಿಸಿಬಿ ಘಟಕದ ಸಿಬ್ಬಂದಿಗಳು ಕಾರ್ಯಾಚರಣೆ ಯಲ್ಲಿ ಭಾಗವಹಿಸಿದ್ದರು.