ಬೆಂಗಳೂರು, ಅ 30(SM): 2018-19 ನೇ ಸಾಲಿನ ಎಸ್ಎಸ್ಎಲ್ಸಿ ವಾರ್ಷಿಕ ಪರೀಕ್ಷೆಯ ವೇಳಾಪಟ್ಟಿ ಬಿಡುಗಡೆಗೊಂಡಿದೆ. ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ತಾತ್ಕಾಲಿಕ ವೇಳಾಪಟ್ಟಿಯನ್ನು ಪ್ರಕಟಿಸಿದೆ.
2019ರ ಮಾರ್ಚ್ 21ರಂದು ವಾರ್ಷಿಕ ಪರೀಕ್ಷೆಗಳು ಆರಂಭಗೊಳ್ಳಲಿವೆ. ಹಾಗೂ ಏಪ್ರಿಲ್4ಕ್ಕೆ ಎಲ್ಲಾ ಪರೀಕ್ಷೆಗಳು ಮುಕ್ತಾಯಗೊಳ್ಳಲಿದೆ. ಅಲ್ಲದೆ ಮಂಡಳಿ ಬಿಡುಗಡೆ ಮಾಡಿರುವ ವೇಳಾಪಟ್ಟಿಗೆ ಆಕ್ಷೇಪಣೆ ಸಲ್ಲಿಸುವವರು ಇದೇ ನವೆಂಬರ್ 26ರ ಒಳಗಡೆ ಸಲ್ಲಿಸಬೇಕು ಎಂದು ಹೇಳಿದೆ. ವಿದ್ಯಾರ್ಥಿಗಳು ತಾತ್ಕಾಲಿಕ ವೇಳಾಪಟ್ಟಿಗೆ ಆಕ್ಷೇಪಣೆ ಸಲ್ಲಿಸಬೇಕಾದರೆ, ನೇರವಾಗಿ ಕರ್ನಾಟಕ ಶಿಕ್ಷಣ ಮಂಡಳಿ ಇಲಾಖೆಗೆ ಆಕ್ಷೇಪಣಾ ಅರ್ಜಿಯನ್ನು ಸಲ್ಲಿಸಬಹುದಾಗಿದೆ.
ತಾತ್ಕಾಲಿಕ ವೇಳಾಪಟ್ಟಿಯ ಪ್ರಕಾರ ಮಾರ್ಚ್ 21ರಂದು ಪ್ರಥಮ ಭಾಷೆ, ಮಾರ್ಚ್ 23ರಂದು ಕೋರ್ ಸಬ್ಜೆಕ್ಟ್, ಮಾರ್ಚ್ 25ರಂದು ಗಣಿತ, ಮಾರ್ಚ್ 27ರಂದು ದ್ವಿತೀಯ ಭಾಷೆ, ಮಾರ್ಚ್ 29ರಂದು ವಿಜ್ಞಾನ, ಏಪ್ರಿಲ್ 2ರಂದು ಸಮಾಜ ವಿಜ್ಞಾನ ಹಾಗೂ ಏಪ್ರಿಲ್ 4ರಂದು ತೃತೀಯ ಭಾಷೆ ವಿಷಯದ ಪರೀಕ್ಷೆಗಳು ನಡೆಯಲಿದೆ.
ದ್ವಿತೀಯ ಪಿಯುಸಿ ಪರೀಕ್ಷೆಯ ತಾತ್ಕಾಲಿಕ ವೇಳಾಪಟ್ಟಿಯನ್ನು ಪದವಿ ಪೂರ್ವ ಶಿಕ್ಷಣ ಇಲಾಖೆ ಸೋಮವಾರ ಬಿಡುಗಡೆ ಮಾಡಿದೆ. ಮಾರ್ಚ್ 1ರಿಂದ 18ರ ವರೆಗೆ ಪರೀಕ್ಷೆಗಳು ನಡೆಯಲಿವೆ. ವೇಳಾಪಟ್ಟಿಯಲ್ಲಿ ತಕರಾರು ಇದ್ದರೆ, ಮನವಿ ಸಲ್ಲಿಸುವಂತೆ ವಿದ್ಯಾರ್ಥಿಗಳಿಗೆ ಸೂಚನೆಯನ್ನು ಸಹ ಮಂಡಳಿ ನೀಡಿದೆ.