ವಿಟ್ಲ, ಅ 31 (MSP): ವಿಟ್ಲ ಸಮೀಪ ನಲ್ವತ್ತು ಅಡಿ ಆಳದ ತೆರೆದ ಕಲ್ಲಿನ ಕೋರೆಯ ಗುಂಡಿಗೆ ಆಟೋ ರಿಕ್ಷಾವೊಂದು ಉರುಳಿಬಿದ್ದು ಚಾಲಕ ಗಂಭೀರ ಗಾಯಗೊಂಡ ಘಟನೆ ಅ.31ರ ಅಕ್ಟೋಬರ್ ಬುಧವಾರ ನಡೆದಿದೆ. ವಿಟ್ಲದ ಉಕ್ಕುಡ ಸಮೀಪದ ಕಾಂತಡ್ಕ ದರ್ಬೆ ಸಮೀಪ ಈ ಘಟನೆ ನಡೆದಿದ್ದು ಆಟೋದಲ್ಲಿ ಪ್ರಯಾಣಿಸುತ್ತಿದ್ದ ಇಬ್ಬರು ಮಹಿಳೆಯರು ಮತ್ತು ಮಗುವಿಗೆ ಸಣ್ಣ ಪುಟ್ಟ ಗಾಯಗಳಾಗಿದೆ.
ಚಾಲಕನ ನಿಯಂತ್ರಣ ಕಳೆದುಕೊಂಡು ಆಟೋರಿಕ್ಷಾ ಉರುಳಿ ಬಿದ್ದಿದೆ ಎನ್ನಲಾಗಿದ್ದು, ಘಟನೆಯಲ್ಲಿ ವಿಟ್ಲ ಕಸಬಾ ಗ್ರಾಮದ ಕಾಂತಡ್ಕ ದರ್ಬೆ ನಿವಾಸಿಯಾದ ಚಾಲಕ ಆಸಿಫ್ (27) ಗಂಭೀರವಾಗಿ ಗಾಯಗೊಂಡಿದ್ದು, ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.