ಕೋಲ್ಕತಾ, ಅ 31(SM): ಮುಂದಿನ ಲೋಕಸಭೆ ಚುನಾವಣೆಗೆ ದೇಶವೇ ಎದುರು ನೋಡುತ್ತಿದೆ. ನರೇಂದ್ರ ಮೋದಿಯವರು ಮತ್ತೆ ಪ್ರಧಾನಿಯಾಗಲಿದ್ದಾರೆ ಎಂಬುವ ಲೆಕ್ಕಾಚಾರದಲ್ಲಿ ಅದೆಷ್ಟೋ ಜನರಿದ್ದಾರೆ. ಮುಂದಿನ ಚುನಾವಣೆಯಲ್ಲಿ ಬಿಜೆಪಿಯ ಮಾಸ್ಟರ್ ಮೈಂಡ್ ಎನಿಸಿಕೊಂಡಿರುವ ಅಮಿತ್ ಶಾ ಕೋಲ್ಕತಾದಿಂದ ಕಣಕ್ಕಿಳಿಯಲಿದ್ದಾರೆ.
ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಕೋಲ್ಕತ್ತಾ ಉತ್ತರ ಕ್ಷೇತ್ರದಿಂದ ಅಮಿತ್ ಶಾರನ್ನು ಕಣಕ್ಕಿಳಿಸಲಿ ಬಿಜೆಪಿ ಚಿಂತಿಸುತ್ತಿದೆ ಎಂದು ಹೇಳಲಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಎರಡನೇ ಕ್ಷೇತ್ರವಾಗಿ ಒಡಿಶಾ ರಾಜ್ಯದ ಒಂದು ಕ್ಷೇತ್ರವನ್ನು ಆಯ್ಕೆ ಮಾಡಬಹುದಾಗಿದೆ. ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರು ಕೋಲ್ಕತಾದಿಂದ ಲೋಕಸಭೆಗೆ ಸ್ಪರ್ಧಿಸುವ ಸಾಧ್ಯತೆ ಹೆಚ್ಚಿದೆ.
ಪಶ್ಚಿಮ ಬಂಗಾಲ ಹಾಗೂ ಒಡಿಶಾದಲ್ಲಿ ಒಟ್ಟು 63 ಸಂಸತ್ ಸ್ಥಾನಗಳಿವೆ. 2014ರಲ್ಲಿ ಬೆಂಗಾಲದಲ್ಲಿ 42 ಕ್ಷೇತ್ರಗಳ ಪೈಕಿ 2 ಸ್ಥಾನ ಮಾತ್ರ ಗೆಲ್ಲಲು ಬಿಜೆಪಿಗೆ ಸಾಧ್ಯವಾಗಿತ್ತು. ಒಡಿಶಾದಲ್ಲಿ 21 ಸ್ಥಾನಗಳ ಪೈಕಿ 1 ಕ್ಷೇತ್ರದಲ್ಲಿ ಮಾತ್ರ ಜಯಿಸಿತ್ತು. ಇದೀಗ ಮಾಸ್ಟರ್ ಮೈಂಡ್ ರನ್ನು ಕೋಲ್ಕತಾದಿಂದ ಕಣಾಕ್ಕಿಳಿಸಿದ್ದಲ್ಲಿ ಮತ್ತಷ್ಟು ಸೀಟು ಗೆಲ್ಲ ಬಹುದೆನ್ನುವುದು ಬಿಜೆಪಿ ಲೆಕ್ಕಾಚಾರ.