ಬೆಳ್ತಂಗಡಿ, ನ 01 (MSP): ಮುಖ್ಯಮಂತ್ರಿ ಕುಮಾರಸ್ವಾಮಿ ಕರ್ನಾಟಕದ ಜನರಿಗೆ , ಕನ್ನಡಕ್ಕೆ ದ್ರೋಹ ಮಾಡ್ತಿದ್ದಾರೆ ಎಂದ ಶಾಸಕ ಹರೀಶ್ ಪೂಂಜಾ ಕಿಡಿಕಾರಿದ್ದಾರೆ. ತಾಲೂಕಿನ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿದ ಅವರು, ಕನ್ನಡದ ಬಗ್ಗೆ ಹೇಳಿಕೆ ನೀಡುವ ಸಿಎಂ ಗೆ ನಿಜವಾಗಿ ಕನ್ನಡಿಗರ ಮೇಲೆ ಸ್ವಾಭಿಮಾನ ಇಲ್ಲ ಎಂದು ಮುಖ್ಯಮಂತ್ರಿ ಮೇಲೆ ಹರಿಹಾಯ್ದಿದ್ದಾರೆ.
ಸರ್ಕಾರವೂ ಶಿಕ್ಷಕರ ವರ್ಗಾವಣೆ ದಂಧೆಯಲ್ಲಿ ತೊಡಗಿಸಿಕೊಂಡಿದ್ದು ಸರ್ಕಾರಿ ಶಾಲೆಯ ಬಡ ಮಕ್ಕಳ ವಿದ್ಯಾಬ್ಯಾಸಕ್ಕೆ ತೊಂದರೆ ಮಾಡುತ್ತಿದೆ. ಕನ್ನಡದ ಪರ ನಿಜವಾದ ಕಾಳಜಿ ಇದ್ದರೆ ಮೊದಲು ರಾಜ್ಯದ ಎಲ್ಲಾ ಸರ್ಕಾರಿ ಶಾಲೆ ಕಾಲೇಜುಗಳಲ್ಲಿ ಶಿಕ್ಷಕರ, ಉಪನ್ಯಾಸಕ ನೇಮಕಾತಿ ಮಾಡಿ ತನ್ನ ಕನ್ನಡದ ಕಾಳಜಿ ಮೆರೆಯಲಿ. ಸರ್ಕಾರ ಮುಂದಾಲೋಚನೆ ಮಾಡಿ ಸರ್ಕಾರಿ ಶಾಲೆಗಳಿಗೆ ಸಕಲ ವ್ಯವಸ್ಥೆ ಕಲ್ಪಿಸಿ ಮಕ್ಕಳ ವಿದ್ಯಾಭ್ಯಾಸಕ್ಕೆ ಅನುಕೂಲ ಮಾಡಲಿ. ಶಿಕ್ಷಕರ ವರ್ಗಾವಣೆ ದಂಧೆ ನಿಲ್ಲಿಸಲಿ ಎಂದು ಚಾಲೆಂಜ್ ಹಾಕಿದರು.
ಕನ್ನಡ ಶಾಲೆಗಳಿಗೆ ಮಕ್ಕಳನ್ನು ಕಳುಹಿಸಿ ಎನ್ನುವ ರಾಜ್ಯ ಸರ್ಕಾರ ಶಿಕ್ಷಕರನ್ನು ಮಾಡದ ತಪ್ಪಿಗೆ ಹೆಚ್ಚುವರಿಯ ನೆಪದಲ್ಲಿ ವರ್ಗಾವಣೆ ಮಾಡಲಾಗುತ್ತಿದೆ. ಕರ್ನಾಟಕದಲ್ಲಿ ಕನ್ನಡ ಭಾಷೆ ಉಳಿಸಿ ಬೆಳೆಸಲು ಮೊದಲು ಶಾಲೆಗಳನ್ನು ಉಳಿಸಿ ಎಂದು ಅಕ್ರೋಶ ವ್ಯಕ್ತಪಡಿಸಿದರು.