ರಾಮನಗರ,ನ 02 (MSP): ಕಾಂಗ್ರೆಸ್ ಹಿರಿಯ ನಾಯಕ ಸಿ.ಎಂ. ಲಿಂಗಪ್ಪ ಅವರು ತಮ್ಮ ಮಗನ ವರ್ತನೆಗೆ ತೀವ್ರ ಅಸಮಧಾನ ವ್ಯಕ್ತಪಡಿಸಿದ್ದಾರೆ. ರಾಮನಗರ ವಿಧಾನಸಭೆ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ದಿಸಿದ್ದ ನನ್ನ ಮಗ ಇನ್ನೇನು ಚುನಾವಣೆ ಎರಡೇ ದಿನ ಬಾಕಿ ಇರುವ ಎಲ್ ಚಂದ್ರಶೇಖರ್ ಹಿಂದೆ ಸರಿದಿರುವುದು ರಾಜಕೀಯವಾಗಿ ಆತ್ಮಹತ್ಯೆ ಮಾಡಿಕೊಂಡಂತೆ, ಅದೊಂದು ಆತ್ಮದ್ರೋಹದ ಕೆಲಸ ಎಂದು ಹೇಳಿದ್ದಾರೆ.
ಬಳ್ಳಾರಿಯಲ್ಲಿ ಮಾತನಾಡಿದ ಅವರು, ರಾಷ್ಟ್ರೀಯ ಪಕ್ಷದಿಂದ ಸ್ಪರ್ದಿಸಿದ್ದ ನನ್ನ ಮಗ ಹೇಡಿಯಂತೆ ವರ್ತಿಸಿದ್ದಾನೆ. ಪಲಾಯನವಾದಿಯಾಗಿದ್ದಾನೆ. ಈ ಹಿಂದೆಯೇ ಬಿಜೆಪಿ ಪಕ್ಷಕ್ಕೆ ಹೋಗಬೇಡ ಎಂದು ಮೊದಲೇ ಬುದ್ದಿ ಹೇಳಿದ್ದೆ. ಆದರೂ ಬಿಜೆಪಿ ಸೇರಿದ್ದ. ಕೊನೆಪಕ್ಷ ಚುನಾವಣೆಯನ್ನು ಎದುರಿಸಿ ಬಳಿಕ ಮುಂದಿನ ನಿರ್ಧಾರ ಕೈಗೊಳ್ಳಬಹುದಿತ್ತು. ಆದರೆ ಮತದಾನ ಎರಡು ದಿನ ಇರುವಾಗ ಈ ಘಟನೆ ನಡೆದಿರುವುದು ಅನೈತಿಕವಾದದ್ದು, ನನ್ನ ಮಗ ಹೀಗೆ ಮಾಡಬಾರದಿತ್ತು, ಕಣದಲ್ಲಿ ಉಳಿದು ಸ್ಪರ್ಧೆ ಎದುರಿಸಬೇಕಿತ್ತು ಎಂದು ಹೇಳಿದ್ದಾರೆ.