ಬೆಂಗಳೂರು,ನ 02 (MSP): ಲೋಕಸಭೆ ಉಪಚುನಾವಣೆಗೆ ಇನ್ನೇನು ಒಂದೇ ದಿನ ಬಾಕಿ ಉಳಿದಿದ್ದು. ಇದರ ಬೆನ್ನಲ್ಲೇ ಬಳ್ಳಾರಿ ಲೋಕಸಭೆಯ ಕಾಂಗ್ರೆಸ್ ಅಭ್ಯರ್ಥಿ ವಿ.ಎಸ್ ಉಗ್ರಪ್ಪನವರಿಗೆ ಕೋರ್ಟ್ ಬಿಸಿ ಮುಟ್ಟಿದೆ. ವಾಹನ ಅಪಘಾತ ಪ್ರಕರಣಕ್ಕೆ ಸಂಬಂಧಪಟ್ಟಂತೆ, ಗಾಯಾಳುಗಳಿಗೆ ಪರಿಹಾರದ ಹಣ ಪಾವತಿ ಮಾಡದ ಕಾಂಗ್ರೆಸ್ ಮುಖಂಡ ಉಗ್ರಪ್ಪ ಮನೆಯಲ್ಲಿನ ಚರಾಸ್ತಿಗಳನ್ನು ಜಪ್ತಿ ಮಾಡಲು ಕೋರ್ಟ್ ಆದೇಶ ನೀಡಿದೆ.
2010ರಲ್ಲಿ ನಡೆದಿದ್ದ ಅಪಘಾತ ಪ್ರಕರಣಕ್ಕೆ ಸಂಬಂಧಪಟ್ಟಂತೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ 4ನೇ ಹೆಚ್ಚುವರಿ ಜಿಲ್ಲಾ ನ್ಯಾಯಾಲಯ ಉಗ್ರಪ್ಪನವರ ಮನೆಯಲ್ಲಿನ ಚರ ಆಸ್ತಿಯನ್ನು ವಶಕ್ಕೆ ಪಡೆಯುವಂತೆ ಆದೇಶಿಸಿ ತೀರ್ಪು ನೀಡಿದೆ.
8 ವರ್ಷಗಳ ಹಿಂದೆ ನಡೆದ ಪ್ರಕರಣದ ವಿಚಾರಣೆಯನ್ನು ಈ ಹಿಂದೆ ನಡೆಸಿದ್ದ ಕೋರ್ಟ್, ಉಗ್ರಪ್ಪನವರಿಗೆ ಅಪಘಾತ ಪರಿಹಾರ ಮೊತ್ತ ಪಾವತಿ ಮಾಡುವಂತೆ ಸೂಚಿಸಿತ್ತು. ಆದರೆ ಕೋರ್ಟ್ ಆದೇಶವನ್ನು ಪಾಲಿಸದ ಉಗ್ರಪ್ಪ ಇಲ್ಲಿಯ ತನಕ ಹಣವನ್ನು ಅವರು ಪಾವತಿಸಿರಲಿಲ್ಲ. ಅಲ್ಲದೆ ವಿಚಾರಣೆಗೆ ಸಹ ಹಾಜರಾಗಿರಲಿಲ್ಲ. ನ.2 ರ ಶುಕ್ರವಾರ ಈ ಪ್ರಕರಣ ಮರು ವಿಚಾರಣೆ ನಡೆದಿದ್ದು ಉಗ್ರಪ್ಪನವರ ಮನೆಯಲ್ಲಿನ ಚರಾಸ್ಥಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಲು ಕೋರ್ಟ್ ಸೂಚಿಸಿದೆ.