ಮೂಲ್ಕಿ, ನ 02(SM): ಮೂಲ್ಕಿ ಬಳಿಯ ಕೆರೆಕಾಡುವಿನಲ್ಲಿ ವಿಷಜಂತು ಕಡಿದು ಕಾಲೇಜು ವಿದ್ಯಾರ್ಥಿನಿ ದಾರುಣವಾಗಿ ಮೃತಪಟ್ಟ ಘಟನೆ ಶುಕ್ರವಾರ ನಡೆದಿದೆ. ಕೆರೆಕಾಡು ನಿವಾಸಿ ಪುರಂದರ ಅವರ ಮಗಳು ಶ್ವೇತಾ(17) ಸಾವನ್ನಪ್ಪಿದ ವಿದ್ಯಾರ್ಥಿನಿ.
ಕಾಲೇಜಿನಿಂದ ಮನೆಗೆ ಆಗಮಿಸಿ ಸಂಜೆ ಮನೆಯ ಬಳಿ ಕೆಲಸ ಮಾಡುತ್ತಿದ್ದ ಸಂದರ್ಭದಲ್ಲಿ ವಿಷಜಂತುವೊಂದು ಶ್ವೇತಾಳ ಕಾಲಿಗೆ ಕಡಿದಿದೆ. ತಕ್ಷಣ ಆಕೆಯನ್ನು ಕಿನ್ನಿಗೋಳಿಯ ಖಾಸಗಿ ಅಸ್ಪತ್ರೆಗೆ ದಾಖಲಿಸಲಾಗಿದ್ದು ಚಿಕಿತ್ಸೆ ಫಲಕಾರಿಯಾಗದೆ ವಿದ್ಯಾರ್ಥಿನಿ ಮೃತಪಟ್ಟಿದ್ದಾಳೆ.
ಶ್ವೇತ, ಮೂಲ್ಕಿ ಕಾರ್ನಾಡುವಿನ ಸರ್ಕಾರಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿ.
ಘಟನೆಯ ಕುರಿತಂತೆ ಮೂಲ್ಕಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.