ಪತ್ತನಂತಿಟ್ಟ, ನ03(SS): ಪಂಪಾ, ಇಲವುಂಕಲ್, ನಿಲಯ್ಕಲ್ ಮತ್ತು ಶಬರಿಮಲೆ ಸನ್ನಿಧಾನದಲ್ಲಿ ಇಂದು ಮಧ್ಯರಾತ್ರಿಯಿಂದ ನ.6ನೇ ತಾರೀಖು ಮಧ್ಯರಾತ್ರಿಯವರೆಗೆ ನಿಷೇಧಾಜ್ಞೆ ಜಾರಿ ಮಾಡಿರುವುದಾಗಿ ಜಿಲ್ಲಾಧಿಕಾರಿ ಪಿ.ಬಿ.ನೂಹ್ ತಿಳಿಸಿದ್ದಾರೆ.
ಶಬರಿಮಲೆ ಬಾಗಿಲು ನ. 5ರಂದು ತೆರೆಯಲಿದೆ. ಈ ಹಿನ್ನೆಲೆಯಲ್ಲಿ, ಮುಂಜಾಗ್ರತಾ ಕ್ರಮವಾಗಿ ಶಬರಿಮಲೆಯಲ್ಲಿ ಪೊಲೀಸರನ್ನು ನಿಯೋಜಿಸಲಾಗಿದೆ. ವಡಶೇರಿಕ್ಕರದಿಂದ ಸನ್ನಿಧಾನದವರೆಗೆ ನಾಲ್ಕು ಪ್ರದೇಶಗಳಲ್ಲಿ ಪೊಲೀಸ್ ಪಡೆ ನಿಯೋಜನೆ ಮಾಡಲಾಗಿದೆ.
ದಕ್ಷಿಣ ವಲಯ ಎಡಿಜಿಪಿ ಅನಿಲ್ಕಾಂತ್ ಸೇರಿದಂತೆ ಹಿರಿಯ ಅಧಿಕಾರಿಗಳು ನಾಳೆಯಿಂದ ಸನ್ನಿಧಾನ, ಪಂಪಾ ಮತ್ತು ನಿಲಯ್ಕಲ್ನಲ್ಲಿ ಠಿಕಾಣಿ ಹೂಡಲಿದ್ದಾರೆ. 5ನೇ ತಾರೀಖಿನಿಂದ ಶಬರಿಮಲೆ ದೇವರ ದರ್ಶನಕ್ಕೆ ಮಹಿಳೆಯರು ಬಂದರೆ ಅವರ ಸುರಕ್ಷೆಗಾಗಿ ಪೊಲೀಸರು ಸಿದ್ಧರಾಗಿದ್ದಾರೆ ಎಂದು ಪತ್ತನಂತಿಟ್ಟ ಎಸ್ಪಿ ಟಿ.ನಾರಾಯಣನ್ ಹೇಳಿದ್ದಾರೆ