ಮಂಗಳೂರು. ನ03(SS): ಹೈಕೋರ್ಟ್ನಿಂದ ಜಾಮೀನು ಪಡೆದುಕೊಂಡಿರುವ ಬಜರಂಗದಳದ ಮುಖಂಡ, ಅಶ್ರಫ್ ಹತ್ಯೆ ಆರೋಪಿಯಾಗಿರುವ ಭರತ್ಗೆ ಮಂಗಳೂರು ಮುಸ್ಲಿಮ್ಸ್ ಎಂಬ ಫೇಸ್ ಬುಕ್ ಪೇಜ್ ನಲ್ಲಿ ಬೆದರಿಕೆ ಹಾಕಲಾಗಿದೆ.
ಘಟನೆಯ ವಿವರ:
ಎಸ್.ಡಿ.ಪಿ.ಐ ಮುಖಂಡನಾಗಿದ್ದ ಅಶ್ರಫ್ ಕಲಾಯಿಯನ್ನು ಬಂಟ್ವಾಳ ತಾಲೂಕಿನ ಬೆಂಜನಪದವು ಎಂಬಲ್ಲಿ 2017 ಜೂ.21 ರಂದು ಬರ್ಬರವಾಗಿ ಹತ್ಯೆ ಮಾಡಲಾಗಿತ್ತು. ಈ ಪ್ರಕರಣದಲ್ಲಿ ಬಜರಂಗದಳದ ಪುತ್ತೂರು ಸಹಸಂಚಾಲಕ ಭರತ್ ಕುಮ್ಡೇಲ್ ಪ್ರಮುಖ ಆರೋಪಿಯಾಗಿದ್ದ. ಘಟನೆಗೆ ಸಂಬಂಧಿಸಿ ಭರತ್ ಸೇರಿ ಹಲವರ ಬಂಧನವಾಗಿತ್ತು. ಆದ್ರೆ 16 ತಿಂಗಳು ಕಳೆದರೂ ಪ್ರಮುಖ ಆರೋಪಿ ಭರತ್ ಗೆ ಜಾಮೀನು ಲಭಿಸಿರಲಿಲ್ಲ. ಇದೀಗ ಹೈಕೋರ್ಟ್ ಆರೋಪಿಗೆ ಜಾಮೀನು ನೀಡಿದೆ.