ಮಂಗಳೂರು, ನ03(SS): ನಗರದ ಎನ್ಎಂಪಿಟಿ (ನವ ಮಂಗಳೂರು ಬಂದರು) ಬಂದರಿನಲ್ಲಿ ಹಡಗಿನ ಟ್ಯಾಂಕ್ ಒಡೆದ ಪರಿಣಾಮ ಸುಮಾರು 150 ಲೀಟರಿಗೂ ಅಧಿಕ ಪ್ರಮಾಣದ ತೈಲ ಸಮುದ್ರಕ್ಕೆ ಸೇರಿದ ಘಟನೆ ನಡೆದಿದೆ.
ಶ್ರೀಲಂಕಾದ ಕೊಲಂಬೋದಿಂದ ಬಂದಿದ್ದ ಎಂ.ವಿ. ಎಕ್ಸ್ಪ್ರೆಸ್ ಬ್ರಹ್ಮಪುತ್ರ ಹಡಗಿನ ಟ್ಯಾಂಕ್ ಒಡೆದು ಈ ಅವಘಡ ನಡೆದಿದೆ. ಪರಿಣಾಮ 150 ಲೀಟರಿಗೂ ಅಧಿಕ ಪ್ರಮಾಣದ ತೈಲ ಸಮುದ್ರ ಸೇರಿದೆ.
ಪಣಂಬೂರಿನಲ್ಲಿರುವ ಎನ್ಎಂಪಿಟಿ ಬಂದರಿನಿಂದ ಕಂಟೈನರ್ ಲೋಡ್ ಮಾಡಿ ಹಿಂದಿರುಗುವ ವೇಳೆ ಈ ಅವಘಡ ನಡೆದಿದೆ. ಮಾಹಿತಿಗಳ ಪ್ರಕಾರ ಹಡಗನ್ನು ಟಗ್ನಲ್ಲಿ ಬಂದರಿನ ಜೆಟ್ಟಿಯಿಂದ ಹೊರಕ್ಕೆ ಒಯ್ಯಲಾಗುತ್ತಿತ್ತು. ಈ ವೇಳೆ ಹಡಗಿನಲ್ಲಿದ್ದ ಟ್ಯಾಂಕರ್ ಜೆಟ್ಟಿಯ ಗೋಡೆಗೆ ಡಿಕ್ಕಿ ಹೊಡೆದ ಪರಿಣಾಮ,ಟ್ಯಾಂಕ್ ನಿಂದ ತೈಲ ಸೋರಿಕೆಯಾಗಿದೆ ಎಂದು ತಿಳಿದುಬಂದಿದೆ.
ತಕ್ಷಣ ಎಚ್ಚೆತ್ತುಕೊಂಡ ಹಡಗಿನ ಸಿಬ್ಬಂದಿ ಹಾಗೂ ಸ್ಥಳೀಯರು ಹಡಗಿನ ತೈಲ ಸೋರಿಕೆಯನ್ನು ತಡೆದು, ಸಮುದ್ರದಲ್ಲಿ ತೈಲ ಹರಡದಂತೆ ಕ್ರಮ ವಹಿಸಿದ್ದಾರೆ.