ಬೆಂಗಳೂರು, ನ 04 (MSP): ರಾಷ್ಟ್ರೀಕೃತ ಬ್ಯಾಂಕ್ನಲ್ಲಿ ರೈತರ ಸಾಲಮನ್ನಾ ವಿಚಾರದಲ್ಲಿ ಸಿಎಂ ಕುಮಾರಸ್ವಾಮಿ ’ಕಾಗದದ ಮೇಲಿನ ಹುಲಿ ಆಗಿದ್ದಾರೆ ’ ಎಂದು ಶಾಸಕ ಸಿ.ಟಿ. ರವಿ ವ್ಯಂಗ್ಯ ಮಾಡಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಬ್ಯಾಂಕ್ಗಳಿಗೆ ಸರ್ಕಾರವೂ ಆದೇಶ ಹೊರಡಿಸಲಿ, ಸರ್ಕಾರದ ಮುಖ್ಯ ಕಾರ್ಯದರ್ಶಿಯಿಂದ ಸಾಲ ಮನ್ನಾದ ಆದೇಶ ಹೊರಡಿಸಬೇಕು. ಕೇವಲ ಸರ್ಕಾರವೂ ಸಾಲ ಮನ್ನಾ ಮಾಡುತ್ತೇವೆ ಎಂಬ ಹೇಳಿಕೆ ನೀಡಿದರೆ ಸಾಲದು, ಅದನ್ನು ಕಾರ್ಯರೂಪಕ್ಕೆ ತಂದರೆ ಮಾತ್ರ ರೈತರಿಗೆ ಅನುಕೂಲ. ರೈತರ ಸಾಲಕ್ಕೆ ಸರ್ಕಾರವೇ ಜವಾಬ್ದಾರಿ ಆಗಿರಲಿದೆ ಎಂದು ಸರ್ಕಾರ ಬ್ಯಾಂಕುಗಳಿಗೆ ತಿಳಿಸಬೇಕು. ಆಗ ಮಾತ್ರ ಬ್ಯಾಂಕುಗಳು ರೈತರಿಗೆ ಸಾಲದ ನೋಟಿಸ್ ನೀಡದಂತೆ ಮಾಡಬಹುದು. ಸರ್ಕಾರಿ ಆದೇಶ ಹೊರಡಿಸಿದ್ರೆ ಬ್ಯಾಂಕ್ನವರು ಯಾಕೆ ರೈತರಿಗೆ ನೋಟಿಸ್ ಕೊಡ್ತಾರೆ? ರೈತರ ಸಾಲಕ್ಕೆ ನಾವು ಜವಾಬ್ದಾರಿ ಎಂದು ಬ್ಯಾಂಕಿಗೆ ಸರ್ಕಾರ ತಿಳಿ ಹೇಳಬೇಕು ಎಂದರು. ಸಿಎಂ ಕುಮಾರಸ್ವಾಮಿ ಬರೀ ಮಾಧ್ಯಮಗಳಲ್ಲಿ ಹೇಳಿಕೆ ನೀಡಿದರೆ ಸಾಲದು ರೈತರ ಸಾಲಮನ್ನಾ ಮಾಡಬೇಕು ಎಂಬುದೇ ನಮ್ಮ ಒತ್ತಾಯ. ಸಾಲ ಮನ್ನಾದ ವಿಚಾರದಲ್ಲಿ ಸಿಎಂ ಎಚ್ಡಿ ಕುಮಾರಸ್ವಾಮಿ ಅವರು ಪೇಪರ್ ಟೈಗರ್ ಎಂದು ಚಿಕ್ಕಮಗಳೂರಿನಲ್ಲಿ ಶಾಸಕ ಸಿ.ಟಿ. ರವಿ ಹೇಳಿದರು.
ಇದರೊಂದಿಗೆ ಟಿಪ್ಪು ಜಯಂತಿ ಆಚರಣೆಗೆ ಸಿದ್ಧತೆ ಮಾಡುತ್ತಿರುವ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಅವರು, ಟಿಪ್ಪು ಇವರ ತಂದೆಯೇ, ತಾತನ ಅಥವಾ ಮುತ್ತಾತನೇ? ಎಂದು ಪ್ರಶ್ನಿಸಿದರು. ಟಿಪ್ಪು ಕರ್ನಾಟಕದ ಆಡು ಭಾಷೆ ಕನ್ನಡದ ಕಟ್ಟ ವಿರೋಧಿಯಾದ್ದ. ಅಲ್ಲದೆ ಇತಿಹಾಸ ಗಮನಿಸಿದಾಗ ಆತ ಆಡಳಿತ ಭಾಷೆಯನ್ನು ಪರ್ಷಿಯನ್ ಭಾಷೆಗೆ ಬದಲಾವಣೆ ಮಾಡಿದ್ದ. ಜತೆಗೆ ರಾಜ್ಯದ ಹಲವು ಜಿಲ್ಲೆಗಳ ಹೆಸರನ್ನು ಬದಲಾಯಿಸಿದ್ದ. ಅಕ್ರಮಣ ಮಾಡಿದವರ ಜಯಂತಿಯನ್ನು ಆಚರಿಸಿದರೆ ಹೇಗೆ? ಇದು ನಾಡಿಗೆ ಒಳ್ಳೆಯ ಬೆಳೆವಣಿಗೆಯಲ್ಲ.
ಇಷ್ಟೆಲ್ಲಾ ಮಾಡುವ ಇವರು ಮತಕ್ಕಾಗಿ ಬಾಬರ್, ಬಿನ್ ಲಾಡೆನ್ ಆಚರಣೆ ಮಾಡಿದರೂ ಆಶ್ಚರ್ಯ ಪಡಬೇಕಾಗಿಲ್ಲ.ಅಂದು ಕಾಂಗ್ರೆಸ್ ಮಾಡಿದ ಇಂದು ಮತ್ತೆ ಮೈತ್ರಿ ಪುನರಾವರ್ತಿಸಲು ಹೊರಟಿದೆ.ಇದರ ಬದಲು ಭಾವೈಕ್ಯತೆಯ ಉದ್ದೇಶದಿಂದ ಶರೀಫ್ ರ ಜಯಂತಿ ಆಚರಿಸಲಿ ಎಂಬ ಸಲಹೆ ನೀಡಿದರು.