ನವದೆಹಲಿ, ನ 05 (MSP): ಪ್ರಧಾನಿ ಹುದ್ದೆ ಅಲಂಕರಿಸಿರುವ ಮೋದಿ ಜರ್ಮನಿಯ ಡಿಕ್ಟೇಟರ್ ಅಡಾಲ್ಫ್ ಹಿಟ್ಲರ್ ರೀತಿ ವರ್ತಿಸುತ್ತಿದ್ದಾರೆ ಎಂದು ಕಾಂಗ್ರೆಸ್ ಹಿರಿಯ ನಾಯಕ ಹಾಗೂ ಸಂಸದ ಮಲ್ಲಿಕಾರ್ಜುನ ಖರ್ಗೆ ಆರೋಪಿಸಿದ್ದಾರೆ.
ಮುಂಬೈನ ಬಾಂದ್ರಾದಲ್ಲಿ ಭಾನುವಾರ ಆಯೋಜಿಸಿರುವ 'ಸಂವಿಧಾನ ಬಚಾವೊ ಪರಿಷತ್ 'ಕಾರ್ಯಕ್ರಮದಲ್ಲಿ ಭಾಗವಹಿಸಿರುವ ಅವರು, ಮೋದಿ ಅವರನ್ನು ಸರ್ವಾಧಿಕಾರಿ ಹಿಟ್ಲರ್ ಗೆ ಹೋಲಿಸಿ ಮಾತನಾಡಿದರು.
ಭಾರತೀಯ ಜನತಾ ಪಾರ್ಟಿಯ ಆಡಳಿತದಿಂದ ದೇಶ ತತ್ತರಿಸಿ ಹೋಗಿದೆ. ಅಲ್ಲದೆ ದೇಶದ ಹಲವು ಸಂಸ್ಥೆಗಳನ್ನು ಸರ್ವನಾಶ ಮಾಡಲು ಪಣತೊಟ್ಟಿದೆ. ಇದೀಗ ಬಿಜೆಪಿ ಕಣ್ಣು ಸಂವಿಧಾನದ ಮೇಲೆ ಇದೆ. ಬೇರೆ ಸಂಸ್ಥೆಗಳನ್ನು ನಾಶ ಮಾಡಿದಂತೆ ಆರ್ ಎಸ್ಎಸ್ ಮತ್ತು ಬಿಜೆಪಿ ಸೇರಿಕೊಂಡು ಸಂವಿಧಾನವನ್ನು ಕೂಡಾ ನಾಶಪಡಿಸಲು ಹೊರಟಿದೆ. ಆದರೆ ಇದನ್ನು ಕೈಗೂಡಲು ಕಾಂಗ್ರೆಸ್ ಬಿಡುವುದಿಲ್ಲ ಎಂದು ಹೇಳಿದರು. ಈ ದೇಶದ ಪವಿತ್ರ ಸಂವಿಧಾನ ಯಾವುದೇ ಒಂದು ನಿರ್ದಿಷ್ಟ ಜಾತಿ, ಧರ್ಮ ಅಥವಾ ಸಮುದಾಯಕ್ಕೆ ಸೇರಿರುವುದಲ್ಲ. ದೇಶದ ಪ್ರತಿ ಪ್ರಜೆಗೂ ಸಂವಿಧಾನ ಸಮಾನಾಗಿ ಸೇರಿದೆ. ಆದರೆ ಬಿಜೆಪಿ ಸಂವಿಧಾನವನ್ನು ಗೌರವಿಸುವುದಿಲ್ಲ ಎಂದರು ದೂರಿದರು.
ಬಿಜೆಪಿ ಆಡಳಿಒತಕ್ಕೆ ಬಂದು ನಾಲ್ಕೂವರೆ ವರ್ಷಗಳಾದರೂ ಅಭಿವೃದ್ದಿ ಕಡೆ ಮಾತ್ರ ನಾಲ್ಕು ಹೆಜ್ಜೆ ಕೂಡ ಇಟ್ಟಿಲ್ಲ. ಹೀಗಾಗಿ ಕಳೆದ 70 ವರ್ಷಗಳಲ್ಲಿ ಏನು ಮಾಡಿದ್ದೀರಿ ಕಾಂಗ್ರೇಸ್ ನ್ನು ಪ್ರಶ್ನಿಸುವ ಅಧಿಕಾರ ಕೂಡಾ ಬಿಜೆಪಿಗೆ ಇಲ್ಲ. ಬಿಜೆಪಿ ದೇಶದ ಜನರ ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಸರ್ವನಾಶ ಮಾಡುತ್ತಾ ಕೊನೆಗ್ ಪತ್ರಿಕಾ ಸ್ವಾತಂತ್ರ್ಯವನ್ನು ಕೂಡ ಹತ್ತಿಕ್ಕುತ್ತಾ ಬಂದಿದೆ ಎಂದು ಆರೋಪಿಸಿದರು.