ನವದೆಹಲಿ,ನ 05 (MSP): ಹಲವು ದಿವಸದಿಂದ ಬೆಲೆ ಏರಿಕೆಯತ್ತ ದಾಪುಗಾಲು ಹಾಕಿದ್ದ ಪೆಟ್ರೋಲ್ ಹಾಗೂ ಡಿಸೇಲ್ ಬೆಲೆ ಇಳಿಕೆಯ ಹಾದಿಯಲ್ಲಿ ಸಾಗುತ್ತಿದ್ದು , ಇದು ಗ್ರಾಹಕರ ಮೊಗದಲ್ಲಿ ಸಂತಸ ಮೂಡಿದೆ. ತೈಲ ಉತ್ಪನ್ನಗಳ ದರ ಇಳಿಕೆಯಾಗಿರುವ ಪರಿಣಾಮ ಮತ್ತೆ ನ.೦5 ರ ಸೋಮವಾರ ಪೆಟ್ರೋಲ್ ದರ 22 ಪೈಸೆ ಹಾಗೂ ಡೀಸೆಲ್ ದರ 20 ಪೈಸೆ ಇಳಿಕೆಯಾಗಿದೆ.
ಹೀಗಾಗಿ ರಾಜಧಾನಿ ದೆಹಲಿಯಲ್ಲಿ ಲೀಟರ್ ಪೆಟ್ರೋಲ್ಗೆ 78.56 ಹಾಗೂ ಡೀಸೆಲ್ಗೆ 73.16 ರಷ್ಟು ಇಳಿಕೆಯಾಗಿದೆ. ಇನ್ನು ಮುಂಬೈನಲ್ಲಿ ಲೀಟರ್ ಪೆಟ್ರೋಲ್ಗೆ 84.06, ಡೀಸೆಲ್ಗೆ 76.67 ದರವಿದೆ. ಅಕ್ಟೋಬರ್ ಮೊದಲ ವಾರದಲ್ಲಿ ಮುಂಬೈನಲ್ಲಿ ಪೆಟ್ರೋಲ್ ದರ 90ರ ಗಡಿ ದಾಟಿದ್ದು ಗಮನಾರ್ಹ.
ಕೇಂದ್ರ ಸರ್ಕಾರ ತೈಲದ ಮೇಲಿನ ಅಬಕಾರಿ ಸುಂಕವನ್ನು ಒಂದೂವರೆ ರುಪಾಯಿ ಕಡಿತಗೊಳಿದ ಬಳಿಕ ದರ ಕುಸಿತದ ಕಡೆ ಮುಖ ಮಾಡಿದೆ.ಇನ್ನು ರಾಜ್ಯದ ರಾಜಧಾನಿ ಬೆಂಗಳೂರಿನಲ್ಲೂ ಪೆಟ್ರೋಲ್ 22 ಪೈಸೆ, ಡೀಸೆಲ್ 17 ಪೈಸೆ ಇಳಿದಿದ್ದು, ಪೆಟ್ರೋಲ್ ಪ್ರತಿ ಲೀಟರ್ಗೆ 79.41 ರೂಪಾಯಿ ಆಗಿದೆ.