ಕೇರಳ, ನ06(SS): ಇಂದು ಬೆಳಗ್ಗೆ ಮಹಿಳೆಯೊಬ್ಬರು ಶಬರಿಮಲೆ ಅಯ್ಯಪ್ಪ ದೇಗುಲದ ಪವಿತ್ರ ಮೆಟ್ಟಿಲುಗಳ ಹತ್ತಿರ ಬರುತ್ತಿದ್ದಂತೆ, ಅಯ್ಯಪ್ಪ ಭಕ್ತಾಧಿಗಳು ಬೃಹತ್ ಪ್ರತಿಭಟನೆ ನಡೆಸಿದ್ದಾರೆ.
52 ವರ್ಷದ ಲಲಿತಾ ಎಂಬವರು ತಮ್ಮ ಕುಟುಂಬದವರೊಡನೆ ಅಯ್ಯಪ್ಪ ಸ್ವಾಮಿಯ ದರುಶನಕ್ಕೆ ಬಂದಿದ್ದರು. ಅವರು ಋತುಮತಿಯಾಗಿರಬಹುದು ಎಂದು ಊಹಿಸಿದ ಭಕ್ತಾದಿಗಳು ಲಲಿತಾ ಅವರ ಪ್ರವೇಶಕ್ಕೆ ಅಡ್ಡಿಯೊಡ್ಡಿ ಪ್ರತಿಭಟನೆಗಿಳಿದಿದ್ದರು.
ಆದರೆ ಆ ಮಹಿಳೆಗೆ 51 ವರ್ಷ ಆಗಿದೆ ಎಂದು ಪೊಲೀಸರು ಮಾಹಿತಿ ನೀಡಿದರೂ, ಪ್ರತಿಭಟನಾಕಾರರು ಸುಳ್ಳು ಹೇಳುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಈ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದುಬರಬೇಕಾಗಿದೆ. ಶಬರಿಮಲೆಯಲ್ಲಿ 10 ವರ್ಷದಿಂದ 50 ವರ್ಷದೊಳಗಿನ ಮಹಿಳೆಯರ ಪ್ರವೇಶವನ್ನು ಪ್ರತಿಭಟನಾಕಾರರು ತಡೆಯುತ್ತಿದ್ದಾರೆ.
ಸರ್ವೋಚ್ಚ ನ್ಯಾಯಾಲಯ ಸೆಪ್ಟೆಂಬರ್ 28ರಂದು ಮಹಿಳೆಯರಿಗೂ ದೇಗುಲ ಪ್ರವೇಶಿಸಲು ಅವಕಾಶ ಮಾಡಿಕೊಡಬೇಕು ಎಂದು ಐತಿಹಾಸಿಕ ತೀರ್ಪು ನೀಡಿತ್ತು. ಆದರೆ 10ರಿಂದ 50 ವರ್ಷದೊಳಗಿನ ಯಾವ ಮಹಿಳೆಯೂ ಇಲ್ಲಿಯವರೆಗೆ ಅಯ್ಯಪ್ಪ ದೇವಸ್ಥಾನದ ಗರ್ಭಗುಡಿ ಪ್ರವೇಶಿಸಿಲ್ಲ. ಪ್ರವೇಶಿಸಲು ಅವಕಾಶವನ್ನೂ ಮಾಡಿಕೊಡಲಾಗಿಲ್ಲ.