ಮಡಿಕೇರಿ, ನ 06(SM): ಕಟ್ಟಡ ನಿರ್ಮಾಣ ವೇಳೆ ಮಣ್ಣು ಕುಸಿದು ಇಬ್ಬರು ಮಹಿಳಾ ಕಾರ್ಮಿಕರು ಸ್ಥಳದಲ್ಲಿಯೇ ಮೃತಪಟ್ಟ ಘಟನೆ ಮಡಿಕೇರಿಯಲ್ಲಿ ನಡೆದಿದೆ.
ಹಾಸನ ಮೂಲದ ಕಾರ್ಮಿಕರಾದ ಗೌರಮ್ಮ (40), ಯಶೋಧ(20) ಮಣ್ಣಿನಡಿ ಸಿಲುಕಿ ಮೃತಪಟ್ಟವರು. ಮಡಿಕೇರಿ ನಿವಾಸಿ ಸುಬ್ಬಯ್ಯ ಎಂಬವರ ಮನೆ ಕಟ್ಟಡ ನಿರ್ಮಾಣ ವೇಳೆ ಈ ಅವಘಡ ಸಂಭವಿಸಿದೆ. ಮತ್ತೋರ್ವ ಕಾರ್ಮಿಕ ವೆಂಕಟಸ್ವಾಮಿ ಗಂಭೀರವಾಗಿ ಗಾಯಗೊಂಡಿದ್ದಾರೆ.
ಕಾರ್ಮಿಕರು ತಮ್ಮ ಹೊಟ್ಟೆ ಪಾಡಿಗೋಸ್ಕರ ಮಡಿಕೇರಿಯ ರಾಜಾ ಸೀಟ್ ಬಳಿ ಮಣ್ಣಿನ ಕೆಲಸಕ್ಕೆ ತೆರಳಿದ್ದರು. ಮಡಿಕೇರಿ ನಗರದ ಗೌಳಿ ಬೀದಿಯಲ್ಲಿನ ಸುಬ್ಬಯ್ಯ ಅವರ ಮನೆಯಲ್ಲಿ ಒಟ್ಟು 6 ಜನ ಇಂದು ತಳಪಾಯನ್ನು ತೆಗೆಯುತ್ತಿದ್ದರು. ಈ ವೇಳೆ ಬರೆ ಕುಸಿದು ನಾಲ್ವರು ಮಣ್ಣಿನಡಿಯಲ್ಲಿ ಸಿಲುಕಿದ್ದಾರೆ. ಅವರಲ್ಲಿ ಇಬ್ಬರು ಮಹಿಳೆಯರು ಅಲ್ಲೆ ಮೃತಪಟ್ಟಿದ್ದಾರೆ. ಇನ್ನು ಈ ನಡುವೆ
ಇಬ್ಬರು ಕಾರ್ಮಿಕರನ್ನು ಸ್ಥಳೀಯರು ಮತ್ತು ಪೊಲೀಸರ ಸಹಾಯದಿಂದ ಪಾರು ಮಾಡಲಾಗಿದೆ.
ಬದುಕುಳಿದ ಇಬ್ಬರನ್ನು ಆಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.