ಬೆಂಗಳೂರು, ನ07(SS): ದೇಶದಾದ್ಯಂತ ಬೆಳಕಿನ ಹಬ್ಬ ದೀಪಾವಳಿಯನ್ನು ಸಂಭ್ರಮ ಹಾಗೂ ಸಡಗರದಿಂದ ಆಚರಿಸಲಾಗುತ್ತಿದ್ದು, ಈ ಹಿನ್ನಲೆಯಲ್ಲಿ, ಪರಿಸರಸ್ನೇಹಿ ದೀಪಾವಳಿ ಆಚರಿಸುವಂತೆ ನಾಡಿನ ಜನತೆಗೆ ಸಿಎಂ ಎಚ್.ಡಿ ಕುಮಾರಸ್ವಾಮಿ ಕರೆ ನೀಡಿದ್ದಾರೆ.
ಪಟಾಕಿ ಅನಾಹುತಗಳ ಬಗ್ಗೆ ಕಳವಳ ವ್ಯಕ್ತಪಡಿಸಿದ ಅವರು, ಪಟಾಕಿ ಸಿಡಿಸುವ ವೇಳೆ ಅತಿ ಎಚ್ಚರಿಕೆ ಇರಲಿ. ಸಾಧ್ಯವಾದಷ್ಟು ಹಣತೆ ಹಚ್ಚಿ ಬೆಳಕು ಹರಡುವ ದೀಪಾವಳಿ ಆಚರಿಸಿ. ಸುಪ್ರೀಂ ಕೋರ್ಟ್ ನೀಡಿರುವ ಆದೇಶ ಪಾಲಿಸಿ ಎಂದು ಸಿಎಂ ಕುಮಾರಸ್ವಾಮಿ ನಾಡಿನ ಜನತೆಗೆ ವಿನಂತಿಸಿಕೊಂಡಿದ್ದಾರೆ.
ದೀಪಾವಳಿ ಹಿನ್ನಲೆಯಲ್ಲಿ ಸಾಮಾಜಿಕ ಜಾಲತಾಣ ಟ್ವಿಟರ್ನಲ್ಲಿ ಟ್ವೀಟ್ ಮಾಡಿರುವ ಅವರು, ದೀಪಾವಳಿ ಸಂಭ್ರಮ ಆಚರಣೆ ವೇಳೆ ಪಟಾಕಿ ಸಿಡಿಸಲು ಹೋಗಿ ಕಣ್ಣಿಗೆಹಾನಿ ಮಾಡಿಕೊಂಡ ಪ್ರಕರಣಗಳು ನನ್ನಲ್ಲಿ ಆತಂಕವನ್ನೂ, ತೀವ್ರ ನೋವನ್ನೂ ಉಂಟುಮಾಡಿದೆ. ದಯವಿಟ್ಟು ಪರಿಸರಸ್ನೇಹಿ ದೀಪಾವಳಿ ಆಚರಿಸಿ. ಪಟಾಕಿ ಸಿಡಿಸುವ ವೇಳೆ ಅತಿ ಎಚ್ಚರಿಕೆ ಇರಲಿ. ಸಾಧ್ಯವಾದಷ್ಟೂ ಹಣತೆಹಚ್ಚಿ ಬೆಳಕು ಹರಡುವ ದೀಪಾವಳಿ ಆಚರಿಸಿ. ಸುಪ್ರೀಂಕೋರ್ಟ್ ನೀಡಿರುವ ಆದೇಶವನ್ನು ಪಾಲಿಸಿ ಎಂದು ತಿಳಿಸಿದ್ದಾರೆ.