ನವದೆಹಲಿ, ನ 09 (MSP): ಎಲ್ಪಿಜಿ ಗ್ಯಾಸ್ ವಿತರಕರಿಗೆ ನೀಡಲಾಗುವ ಕಮಿಷನ್ ದರವನ್ನು ಸರಕಾರ ಏರಿಕೆ ಮಾಡಿದ ಬೆನ್ನಲ್ಲೇ ಅಡುಗೆ ಅನಿಲ ಎಲ್ಪಿಜಿ ಸಿಲೆಂಡರ್ ಗಳ ಬೆಲೆಯಲ್ಲಿ ರೂ 2ರಷ್ಟು ಹೆಚ್ಚಳ ಮಾಡಿದೆ. 14.2 ಕೆಜಿ ತೂಕದ ಸಿಲಿಂಡರ್ ಹಾಗೂ 5 ಕೆಜಿ ತೂಕದ ಸಿಲಿಂಡರ್ ದರದಲ್ಲಿ ಏರಿಕೆಯಾಗಿದ್ದು, ಒಂದು ತಿಂಗಳ ಅವಧಿಯಲ್ಲಿ ಇದು ಎರಡನೇ ಬಾರಿ ದರ ಏರಿಕೆಯಾಗಿದೆ. ಹೀಗಾಗಿ ದೆಹಲಿಯಲ್ಲಿ ಸಿಲಿಂಡರ್ ಬೆಲೆ ರೂ 505.34ರಿಂದ ರೂ. 507.42 ಆಗಿದೆ.
ಗ್ಯಾಸ್ ಸಿಲಿಂಡರ್ ಎಜೆಂಟರ ಕಮಿಷನ್ 2017 ರ ಸೆಪ್ಟೆಂಬರ್ ನಲ್ಲಿ 48.89 ಮತ್ತು 24.20 ರೂ ನಿಗದಿಯಾಗಿತ್ತು ಬಳಿಕ 2018 ರ ಸೆಪ್ಟೆಂಬರ್ ನಲ್ಲಿ 50.28ರೂ. ಹಾಗೂ 25.29ರೂ.ಗೆ ಏರಿಸಲಾಗಿತ್ತು. ನವೆಂಬರ್ 1ರಂದು ತೆರಿಗೆ ಆಧಾರದ ಮೂಲಧವನ್ನು ಏರಿಸಲಾಗಿತ್ತು.
ನವೆಂಬರ್ 1ರಂದು ಸಿಲೆಂಡರ್ ಒಂದಕ್ಕೆ 2.94 ರೂ. ಏರಿಕೆ ಮಾಡಲಾಗಿತ್ತು. ಇದಾದ ಒಂದು ವಾರದಲ್ಲೇ ಮತ್ತೆ ಸಿಲಿಂಡರ್ ದರ ರೂ 2ರಷ್ಟು ಹೆಚ್ಚಳ ಮಾಡಿದೆ. ಕಳೆದ ಜೂನ್ ನಿಂದ ಎಲ್ ಪಿಜಿ ಗ್ಯಾಸ್ ಸಿಲೆಂಡರ್ ಬೆಲೆಯಲ್ಲಿ ಏರಿಕೆಯಾಗುತ್ತಲೇ ಇದ್ದು, ಇದುವರೆಗೆ ಒಟ್ಟು ಬೆಲೆ 16.21 ರೂ.ಹೆಚ್ಚಳವಾಗಿದೆ.