ಮಂಗಳೂರು, ಅ 02 (DaijiworldNews/MS): ಮಂಗಳೂರು ನಗರದಲ್ಲಿ ಅತ್ಯಂತ ಅಧಿಕ ಪ್ರಮಾಣದಲ್ಲಿ ವಾಹನಗಳ ಓಡಾಟ ಇರುವುದರಿಂದ ಸಾರ್ವಜನಿಕರ ಮೂಲಕ ಸಂಚಾರ ವ್ಯವಸ್ಥೆಯನ್ನು ಸರಿಪಡಿಸುವ ನಿಟ್ಟಿನಲ್ಲಿ ಒಂದು ವಾರಗಳ ಕಾಲ ವಿಶೇಷ ಟ್ರಾಫಿಕ್ ಡ್ರೈವ್ ಮುಂದುವರಿದಿದ್ದು, ಸಂಚಾರ ನಿಯಮ ಉಲ್ಲಂಘಿಸಿದವರ ವಿರುದ್ದ ವಿಶೇಷ ಕಾರ್ಯಾಚರಣೆ ನಡೆಸಿದ ಮಂಗಳೂರು ಪೊಲೀಸರು 5 ದಿನಗಳಲ್ಲಿ17.50 ಲಕ್ಷ ರೂ. ದಂಡ ವಸೂಲಿ ಮಾಡಿದ್ದಾರೆ.

ಸೆ.27 ರಂದು ಟಿಂಟೆಡ್ ಗ್ಲಾಸ್ ಹಾಕಿದ್ದಕ್ಕೆ 533 ಪ್ರಕರಣ ದಾಖಲಿಸಿ 2.66 ಲ.ರೂ ಸೆ.28 ರಂದು ನಂಬರ್ ಪ್ಲೇಟ್ ದೋಷದ ಬಗ್ಗೆ 928 ಪ್ರಕರಣ ದಾಖಲಿಸಿ 4.50 ಅ ರೂ ಸೆ.29 ರಂದು ಹೆಲ್ಮೆಟ್ ಬಗ್ಗೆ ಕಾರ್ಯಾಚರಣೆ ನಡೆಸಿ 725 ಪ್ರಕರಣ ದಾಖಲಿಸಿ 3.64 ಲ.ರೂ . ಸೆ 30 ರಂದು ವಿಮೆ ದಾಖಲೆ ತಪಾಸಣೆ ನಡೆಸಿ 91 ಪ್ರಕರಣ ದಾಖಲಿಸಿ 98,500 ರೂ. ದಂಡ ದಾಖಲಿಸಿಕೊಳ್ಳಲಾಗಿದೆ.
ಹಳೆಯ ಪ್ರಕರಣಗಳಿಗೆ ಸಂಬಂಧಿಸಿ ತಪಾಸಣೆ ನಡೇಸಲಾಗಿದ್ದು ಒಂದೇ ದಿನ 1003 ಕ್ಕೂ ಅಧಿಕ ಪ್ರಕರಣ ದಾಖಲಿಸಿ 5.71 ಲ.ರೂ ಗಳಿಗೂ ಅಧಿಕ ದಂಡ ವಸೂಲಿ ಮಾಡಲಾಗಿದೆ.