ಕುವೈಟ್, ನ10(SS): ಕುವೈಟ್ ಕೆನರಾ ವೆಲ್ ಫೇರ್ ಅಸೋಸಿಯೇಷನ್ ಪ್ರಾಯೋಜಕತ್ವದ ‘ಗಲ್ಫ್ ವಾಯ್ಸ್ ಆಫ್ ಮಂಗಳೂರು’ ಕೊಂಕಣಿ ಗಾಯನ ಸ್ಪರ್ಧೆಯ ಆರನೇ ಆವೃತ್ತಿ ಕುವೈಟ್ ನಲ್ಲಿ ಸಮಾಪನಗೊಂಡಿದೆ.
ಈ ‘ಗಲ್ಫ್ ವಾಯ್ಸ್ ಆಫ್ ಮಂಗಳೂರು’ ಕೊಂಕಣಿ ಗಾಯನ ಸ್ಪರ್ಧೆಯಲ್ಲಿ ಕ್ಲೆಮೆಂಟ್ ಫೆರ್ನಾಂಡಿಸ್ ಕತಾರ್ ಹಾಗೂ ಸಬಿತಾ ಮಥಾಯಸ್ ಯುಎ ಇ ಶ್ರೇಷ್ಟ ಗಾಯಕ ಗಾಯಕಿ ಪ್ರಶಸ್ತಿಯನ್ನು ತಮ್ಮ ಮುಡಿಗೇರಿಸಿಕೊಂಡಿದ್ದಾರೆ.
ಮೊದಲ ರನ್ನರ್ ಅಪ್ ಆಗಿ ಶೆಲ್ಟನ್ ಪಿಂಟೋ ಕುವೈಟ್ ಹಾಗೂ ಟೀನಾ ಡಿಸೋಜ ಬಹರಿನ್ ಆಯ್ಕೆಯಾಗಿದ್ದು, ಎರಡನೇ ರನ್ನರ ಅಪ್ ಆಗಿ ಎನ್ಸನ್ ಮಥಾಯಸ್ ಯು ಎಇ ಹಾಗೂ ಕ್ರಿಸ್ಟಿಲ್ಲಾ ಪಿಂಟೊ ಕತಾರ್ ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಾರೆ.
ಈ ‘ಗಲ್ಫ್ ವಾಯ್ಸ್ ಆಫ್ ಮಂಗಳೂರು’ ಕೊಂಕಣಿ ಗಾಯನ ಸ್ಪರ್ಧೆಯಲ್ಲಿ 6 ಗಲ್ಫ್ ರಾಷ್ಟ್ರಗಳ 12 ಸ್ಪರ್ಧಿಗಳು ಸ್ಪರ್ಧಾ ಕಣದಲ್ಲಿದ್ದರು. ಶ್ರೇಷ್ಟ ಕೊಂಕಣಿ ಗಾಯಕರನ್ನು ಗುರುತಿಸಿ ಪ್ರೋತ್ಸಾಹಿಸುವ ಉದ್ದೇಶದಿಂದ ಪ್ರತಿ 2 ವರ್ಷಗಳಿಗೊಮ್ಮೆ ಈ ಸ್ಪರ್ಧೆಯನ್ನು ಆಯೋಜಿಸಲಾಗುತ್ತಿದೆ. ಮುಂದಿನ 7ನೇ ಆವೃತ್ತಿಯು ಎಇಯಲ್ಲಿ 2020ರಲ್ಲಿ ಮಂಗಳೂರು ಕೊಂಕಣ್ಸ್ ಇವರ ನೇತೃತ್ವದಲ್ಲಿ ನಡೆಯಲಿದೆ.
ಕುವೈಟ್ ನ ಸಭಾ ಅಲ್ ಸಲೇಮ್ ಥಿಯೇಟರ್ ನಲ್ಲಿ ಕೊಂಕಣಿ ಗಾಯನ ಸ್ಪರ್ಧೆ ನಡೆದಿದ್ದು, ಕಾರ್ಯಕ್ರಮಕ್ಕೆ ಲಾರೆನ್ಸ್ ಪಿಂಟೋ , ಫಾದರ್ ನೊಯಲ್ ಅಲ್ಮೆಡಾ, ದಾಯ್ಜಿವಲ್ಡ್ ಸಮೂಹ ಸಂಸ್ಥೆಯ ನಿರ್ದೆಶಕರಾದ ವಾಲ್ಟ ರ್ ನಂದಳಿಕೆ, ಆಸ್ಟಿನ್ ಪ್ರಭು ಡಿಸೋಜಾ ಚಿಕಾಗೋ, ನವೀನ್ ರಂಜಿತ್, ಸ್ಟೀವನ್ ಮಿಸ್ಕ್ತಿತ್ ಹಾಗೂ ಸ್ಟೀವನ್ ರೇಗೋ ದೀಪ ಬೆಳಗಿಸುವ ಮೂಲಕ ಚಾಲನೆಯನ್ನು ನೀಡಿದ್ದರು.