ಮಂಗಳೂರು, ನ10(SS): ನಗರದಲ್ಲಿ ಟಿಪ್ಪು ಜಯಂತಿ ಆಚರಣೆಯನ್ನು ವಿರೋಧಿಸಿ ಕರಿ ಪತಾಕೆ ಪ್ರದರ್ಶಿಸಿದ ಬಿಜೆಪಿ ಮುಖಂಡನೋರ್ವನನ್ನು ಉರ್ವ ಠಾಣೆ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಬಂಧಿತನನ್ನು ಬಿಜೆಪಿ ಮುಖಂಡ ಫ್ರಾಂಕ್ಲಿನ್ ಮೋಂತೆರೊ ಎಂದು ಗುರುತಿಸಲಾಗಿದೆ.
ದ.ಕ. ಜಿಲ್ಲಾ ಪಂಚಾಯತ್ ಕಚೇರಿ ಮುಂದೆ ಟಿಪ್ಪು ಜಯಂತಿ ಆಚರಣೆಯನ್ನು ವಿರೋಧಿಸಿ ಪ್ರತಿಭಟನೆ ನಡೆದಿತ್ತು. ಪ್ರತಿಭಟನೆಯಲ್ಲಿ ಟಿಪ್ಪುಗೆ ಧಿಕ್ಕಾರ, ಸಿದ್ದರಾಮಯ್ಯರಿಗೆ ಧಿಕ್ಕಾರ ಹಾಗು ಗೃಹಸಚಿವರಿಗೆ ಧಿಕ್ಕಾರ ಕೂಗಿ, ಕರಿ ಪತಾಕೆ ಪ್ರದರ್ಶಿಸಿದ ಹಿನ್ನೆಲೆಯಲ್ಲಿ ಬಿಜೆಪಿ ಮುಖಂಡ ಫ್ರಾಂಕ್ಲಿನ್ ಮೋಂತೆರೊ ಅವರನ್ನು ಬಂಧಿಸಲಾಗಿದೆ ಎಂದು ತಿಳಿದುಬಂದಿದೆ.