ಗೋವಾ, ನ 11 (MSP): ಹೊರರಾಜ್ಯಗಳಿಂದ ಗೋವಾಕ್ಕೆ ಮೀನು ತರಿಸುವುದಕ್ಕೆ ಗೋವ ಸರ್ಕಾರವು 6 ತಿಂಗಳ ಕಾಲ ನಿರ್ಬಂಧ ಹೇರಿ ಆದೇಶ ಹೊರಡಿಸಿದೆ ಎಂದು ಆರೋಗ್ಯ ಮಂತ್ರಿ ವಿಶ್ವಜಿತ್ ರಾಣೆ ತಿಳಿಸಿದ್ದಾರೆ. ಈ ಕುರಿತು ಮಾಹಿತಿ ನೀಡಿದ ಅವರು ಈ ಆದೇಶವು ಬರುವ ಸೋಮವಾರದಿಂದ ಜಾರಿಗೆ ಬರಲಿದೆ. 6 ತಿಂಗಳ ಬ್ಯಾನ್ ನಂತರ ಪ್ರಿಸ್ಥೊತಿ ನೋಡಿಕೊಂಡು ಈ ನಿರ್ಬಂಧ ಮುಂದುವರಿಸುವ ಸಾಧ್ಯತೆಯಿದೆ. ಹೊರ ರಾಜ್ಯಗಳಿಂದ ಬರುವ ಮೀನುಗಳಲ್ಲಿ ಫಾರ್ಮಲಿನ್ ಎಂಬ ರಾಸಯನಿಕ ಅಂಶ ಪತ್ತೆಯಾದ ಹಿನ್ನಲೆಯಲ್ಲಿ ಗೋವದಲ್ಲಿ ಗೊಂದಲ ಸೃಷ್ಟಿಯಾಗುವಂತಾಗಿದೆ. ಈ ಹಿನ್ನಲೆಯಲ್ಲಿ ಗೋವಾ ಸರ್ಕಾರವು ರಾಜ್ಯದ ಜನತೆಯ ಆರೋಗ್ಯದ ಹಿತವನ್ನು ಗಮನದಲ್ಲಿಟ್ಟುಕೊಂಡು ಈ ನಿರ್ಣಯ ತೆಗೆದುಕೊಂಡಿದೆ ಎಂದು ತಿಳಿಸಿದ್ದಾರೆ.
ಗೋವಾದ ಈ ನಿರ್ಧಾರದಿಂದ ಕರ್ನಾಟಕ, ಕೇರಳ, ಮಹಾರಾಷ್ಟ್ರದ ವಿವಿಧ ಭಾಗಗಳಿಂದ ಗೋವಾಕ್ಕೆ ಮೀನು ಪೂರೈಕೆ 6 ತಿಂಗಳವರೆಗೆ ಸಂಪೂರ್ಣ ಸ್ಥಗಿತಗೊಳ್ಳಲಿದೆ. ಇದರಿಂದ ನೆರೆಯ ರಾಜ್ಯಗಳ ಮೀನು ವ್ಯಾಪರ್ಸ್ಥರಿಗೆ ತೊಂದರೆಯಾಗಲಿದೆ, ಅಲ್ಲದೆ ಗೋವಾದ ಮೀನು ಮಾರುಕಟ್ಟೆಯಲ್ಲಿ ಮೀನಿನ ಕೊರತೆಯುಂಟಾಗಿ ಬೆಲೆ ಏರಿಕೆಯಾಗುವ ಸಾಧ್ಯತೆ ಇದೆ.